Thursday, January 26, 2017

ನೀ ಬರಲಿಲ್ಲ ಅಂದು



ಕಡಲ ತಿರಾದಲ್ಲಿ, ನಾ ಕಾದು ಕುಲಿತಿದ್ದೆ…. ನೀ ಬರಲಿಲ್ಲ ಅಂದು
ಚಂದಿರನ ಕಾಂತಿಯು ಎಲ್ಲೆಡೆ ಚೆಲ್ಲಿತು, ನಾ ಕಾದು ಕುಲಿತಿದ್ದೆ, ನೀ ಬರಲಿಲ್ಲ ಅಂದು
ಮರಲಿನಲ್ಲಿ ಮನೆಮಡಿ... ನಾ ಕಾದು ಕುಲಿತಿದ್ದೆ, ನೀ ಬರಲಿಲ್ಲ ಅಂದು
ಹಕ್ಕಿಯ ಚಿಲಿಪಿಲಿ ಸದ್ದೀನಲಿ.... ನಿನ್ನನೆ ನೆನೆಯುಟ್ಟ ನಾ ಕಾದು ಕುಲಿತಿದ್ದೆ, ನೀ ಬರಲಿಲ್ಲ ಅಂದು
ಕಟ್ತಳು ಕಗ್ಗತಳೀನ ಚವಣಿಯಲ್ಲಿ... ನಾ ಕಾದು ಕುಲಿತಿದ್ದೆ, ನೀ ಬರಲಿಲ್ಲ ಅಂದು

Wednesday, December 15, 2010

ಮಾತಿನಲ್ಲೊಂದು ಮಾತು

ಮುನ್ನುಡಿ:
ಮನಸ್ಸು ಅತಿಯಾಗಿ ದುಖಃದ ಹೊಳೆಯಲ್ಲಿ ಮುಳುಗಿದ್ದಾಗ, ಕತ್ತಲೆಯ ಕಾಲುವೆಯಲ್ಲಿ ಈಜುಸುತಿರುವಾಗ, ನನ್ನವರು ನಮ್ಮವರು ಯಾರೂ ಬಳಿಯಲ್ಲಿ ಇಲ್ಲದೆ ಮನಸ್ಸು ಏಕಾಂತದ ಬಿಸಿಯಲ್ಲಿ ಬೇಯುತಿರುವಗ, ನೋವಿನ ಕನ್ನಡಿಯ ಶೃಂಗಾರ ಗೊಂಬೆಯಾದಾಗ, ಮನಸ್ಸು ಕುರೂಪಿಯಾದಾಗ.. ಈ ಜೀವನದ ಬಂಡಿಯಲ್ಲಿ ಸಂತೊಷದ ಅಲೆಯನ್ನು ಶೃಷ್ಠಿಸಲಿಕ್ಕೆ, ಮನಸ್ಸನ್ನು ಕುರೂಪು ತನದಿಂದ ದೂರ ಮಾಡಲಿಕ್ಕೆ, ಏಕಾಂತದ ಚಿತೆಯಿಂದ ಹೊರಬರಿಸಲಿಕ್ಕೆ ಮಾತಿನ ಬಾಣಗಳು ಅತ್ಯಾವಶ್ಯಕ. ನಾವು ಯಾರಿಗೂ ಯಾವ ವಿಧದ ಸಹಾಯಮಾಡದಿದ್ದರೂ ಸರೀನೆ, ಆದರೆ ನಮ್ಮ ಮಾತಿನಲ್ಲಿ ಮಜ್ಜಿಗೆಯ ತಂಪು ನೀಡಿದರೆ, ಕೇಳುವವರ ಮನಸ್ಸು ಅಮೃತದ ವಾಸನೆ ತಗೋಳದೆ ಇರುತ್ತೆ. ದಾರಿಯಲ್ಲಿ ಸಿಕ್ಕ ವಯಸ್ಸಾದ ವೃದ್ಧನಿಗೆ ನಾವು ತಾತ ಅಥವ ಅಜ್ಜ ಎಂದು ಕರೆದ ಕೂಡಲೆ ಅವರ ಮುಖದಲ್ಲಿ ಅರಳೊ ಸಂತೊಷದ ಅಲೆಗಳಿಗೆ ಬೆಲೆ ಕಟ್ಟುವುದಕ್ಕೆ ಸಾಧ್ಯವೆ. ಮಾತಿನಲ್ಲಿ ಹಲವಾರು ಮಾತುಗಳಿವೆ ಅವುಗಳನ್ನು ಅರಿತು ಹಿತವಾಗಿರೊ ಮಾತನ್ನು ಆಡಿದರೆ, ಕೇಳುವವರ ಮನಸ್ಸಿಗೆ ಒಂದಿಷ್ಟು ಮಜ್ಜಿಗೆ ಕುಡಿಸಿದಂತಾಗುವುದು. ಗಾದೆನೆ ಇದೆಯಲ್ಲವ " ಮಾತು ಬಲ್ಲವನಿಗೆ ಜಗಳವಿಲ್ಲ".
ನಿಮ್ಮ ಎಲ್ಲಾ ಮಾತು ಮುತ್ತಿನಂತೆ ಇರಲಿ ಎಂದು ಬಯಸುತ್ತ, ಮಾತಿನ ಕಾಡಿನಲ್ಲಿ..
ಮುಗುಳುನಗೆಯ ಜಿಂಕೆಯಾಗಿ ಇಂದು ಮನಸ್ಸು ಕುಣಿದಾಡುತ್ತ ಇಟ್ಟ ಹೆಜ್ಜೆಯ ಗುರುತು ಈ ನನ್ನ ಮಾತಿನಲ್ಲೊಂದು ಮಾತು.


ಮಾತಿನಲ್ಲೊಂದು ಮಾತು ಮುಗುಳುನಗೆ ಬೀರಿದರೆ, ಮನಸ್ಸೆಂಬ ಸರೋವರದಲ್ಲಿ ಸಂತೋಷದ
ಅಲೆಗಲು ಉದ್ಭವಿಸಲಾರದೆ. ಮಾತಿನ ಮಂಟಪದಲ್ಲಿ ಮಾತು ಮಾತುಗಳ ನಡುವೆ ಪ್ರೀತಿ
ಪ್ರೇಮಗಳ ಸರಮಾಲೆಗಳಾದಾಗ ಮನಸ್ಸೆಂಬ ಹುಚ್ಚು ಹೊಳೆಯಲ್ಲಿ ಆನಂದದ ಮಳೆಯು
ಬೀಳಲಾರದೆ? ಹೃದಯದಿಂದ ಮತ್ತೊಂದು ಹೃದಯಕ್ಕೆ ತಲಪುವ ಮಾತಿನ ಅಲೆಗಳನ್ನು
ಕಣ್ಣಿಂದ ಕಾಣಲು ಸಾಧ್ಯವೆ? ಹೃದಯದ ಮಾತುಗಳನ್ನು ಅನುಭವಿಸಿದ ಕ್ಷಣಗಳನ್ನು
ಮರೆಯಲು ಸಾಧ್ಯವೆ?


ಭಿಕ್ಷುಕನ ಕೂಗಿನಲ್ಲಿ ಅದ್ಯಾವ ಮಾತು ಮನಸಿನ ಧೃಡತೆಯನ್ನು ಹೊಡೆದು ಕನಿಕರ
ಮನಸಿನ ಬಾಗಿಲನ್ನು ತಗೆಯುವುದೊ? ಕಣ್ಣಿನ ನೋಟದಲ್ಲಿ ಅದೆಷ್ಟು ಮಾತುಗಳು ಅಡಗಿದೆ
ಎಂದು ಯಾರಿಗೆ ಹೇಳಲು ಸಾಧ್ಯ. ಮಾತಿಲ್ಲದ ಮೌನದಲ್ಲಿ ಅದೆಷ್ಟು ಮಾತುಗಳು ಅಡಗಿದೆ
ಎಂದು ಊಹೆಗೆ ಎಟಕುವುದೆ ಹೇಳಿ.... ಮೌನದಲ್ಲಿ ಮನಸಿನ ಹಲವಾರು ಬಾಗಿಲುಗಳು ತೆರೆದು
ವಿಶಾಲವಗಿರೊ ನೀಲಿ ಮೇಘಗಳ ನಡುವೆ ಸಂಚಾರ ನಡೆಸುವ ಮನಸಿಗೆ, ಹಲವಾರು
ಮಾತುಗಳ ಮೆರವಣಿಗೆ ನಡೆಯುತ್ತದೆ. ನೀಲಿ ಮೇಘಗಳ ಮಾತಲ್ಲಿ, ಸುಂದರ
ವಿಶಾಲಮನೊಭವಗಳ ಜಾತ್ರೆ ಕಂಡುಬಂದರೆ, ಬೆಳ್ಳಿ ಮೊಡಗಳ ಮಾತಲ್ಲಿ, ನೀಲಿ
ಬಾನಿಗೆ ಬೆಳಕಿನ ದೀಪಗಳ ಸಂತೆಯಗಿ ತೊರಿಬರುತ್ತದೆ. ಕಪ್ಪು ಮೊಡಗಳ ಮಾತಲ್ಲಿ,
ಮುಸ್ಸಂಜೆಯ ಮುಸುಕಲ್ಲಿ ಮೇಘಗಳು ಪರಸ್ಪರ ಒಂದುಕ್ಕೊಂದು ಸ್ಪರ್ಷಿಸಿ, ಪ್ರೇಮದ
ಖಗ್ಗತ್ತಲಲ್ಲಿ ಕಳೆದುಹೋಗುವ ಮಾತುಗಳು ಕೇಳಿಬರುತ್ತವೆ...


ನೀರಿನ ಸಂಚಲನದಲ್ಲಿ ಅಡಗಿರುವ ಮಾತು ಮನಸ್ಸಿನಲ್ಲಿ ಅಡಗಿರುವ ಅದೆಷ್ಟು
ಮನಸ್ಸುಗಳನ್ನು ಒಗ್ಗೂಡಿಸಿ, ಮನಸನ್ನು ಏಕಾಗ್ರತೆಯ ಸವಿಬಂಧನದಲ್ಲಿರಿಸುತ್ತದೆ.
ವಿರಹದಲ್ಲಿರೋ ಪ್ರೇಮಿಯು ತನ್ನ ಪ್ರಿಯತಮೆಯನ್ನು ಕಂಡಾಗ, ಹೃದಯದಲ್ಲಾಗುವ ಮಾತಿಗೆ
ಕೊನೆ ಎಲ್ಲಿದೆ. ಬಾಯಿಂದ ಬರುವ ಮಾತು ಕೇವಲ ೪ ಸಾಲಾದರೆ, ಮನಸ್ಸಿನಲ್ಲಿ ಮೂಡಿಬರುವ
ಮಾತುಗಳ ಮಹಲಿಗೆ ಬಣ್ಣ ಹಚ್ಚುವವರಾರು. ಮನಸ್ಸಿನಲ್ಲಿ ಮೂಡಿಬರುವ ಒಂದೊಂದು
ಮಾತುಗಳಿಂದ ಮುತ್ತಿನ ಹಾರ ಪೋಣಿಸಿ ತನ್ನ ಪ್ರೀಯತಮೆಯ ಕೊರಳಲ್ಲಿ ಹಾಕಿದಾಗ,
ಹೃದಯದಲ್ಲಿ ಸ್ವರ್ಗದ ದೀಪ ಹಚ್ಚಿದಂತಾಗವುದು.


ಮನಸ್ಸಿಲ್ಲದ ಮಾತುಗಳಿಂದ ಸಂಗೀತದ ನಾದ ನುಡಿಸಬಲ್ಲದೆ?ಇಂಪಾದ ಮಾತಿನಲ್ಲಿ
ತಂಪಾದ ಗಾಳಿಯ ಗಂಧವನ್ನು ಯಾರು ಅರಿಯುವರು. ಮಲ್ಲಿಗೆ ಹೂವಿನ ಸುಗಂಧ ಮೂಗಿಗೆ
ಬೀರಿದ ಕ್ಷಣವೆ, ಮನಸ್ಸಿನಲ್ಲಾಗುವ ಬದಲಾವಣೆಗೆ ಅದ್ಯಾವ ಮಾತು ಹೊರಬರುವುದೋ
ಯಾರು ಕಾಣುವವರು. ಮಾತು ಕೇವಲ ಮಾತಾಗಿದ್ದರೆ ಅದನ್ನು ಸಂಭಷಣೆ ಅನ್ನಬಹುದು,
ಆದರೆ ಭಾವನೆಗಳಿಂದ ಹೊರಹೊಮ್ಮುವ ಶಬ್ಧವಿಲ್ಲದ ಮಾತಿನ ಬಾಣಕ್ಕೆ, ಹೃದಯದ
ಬಡಿತದಲ್ಲಾಗುವ ಬದಲವಣೆಯೇ ಸಾಕ್ಷಿಯಾಗಿರುತ್ತದೆ.


ಮೇಘಗಳ ಸಂಘರ್ಶದಿಂದ ಹೊರಹೊಮ್ಮುವ ಶಬ್ಧವನ್ನು ಅದ್ಯಾವ ಮಾತೆನ್ನುವುದು,
ಅದಕ್ಕೆ ಯಾವ ಭಾಷೆಯಂತೆನಾದರು ಕರೆಯಬಹುದು. ಮಾತುಗಳು ಕೇವಲ ಭಾಷೆಯಿಂದ
ಬರುವುದೆನ್ನುವುದಾದರೆ ಮೇಘಗಳ ಘರ್ಷಣೆಗೆ ಯಾವ ಅರ್ಥ ಕೊಡುವುದು.
ಅಂತರಂಗದ ತೆರೆಯಲ್ಲಿ ಛಾಯಿಸಿದ ಚಿತ್ರಣಗೆ ಜೀವನೀಡಿದಾಗ ಅನುಭವವಾಗುವುದು
ಮಾತಿನಲ್ಲೊಂದು ಮಾತು.


ಕೆಲವೊಮ್ಮೆ, ಮನಸ್ಸು ಅದನ್ನು ಘ್ರಹಿಸಿ ಆನಂದಿಸುತ್ತದೆ, ಕೆಲವೊಮ್ಮೆ ಮಂಕು ತಿಮ್ಮನ
ಬಂಡಿಯಲ್ಲಿ ಸಾರಥಿಯಾಗಿ ರಥವನ್ನು ದಿಕ್ಕಿಲದ ದಾರಿಯಲ್ಲಿ ಸಾಗಿಸುತ್ತದೆ.
ಹಿತವಾದ ಮಾತು ಮಲ್ಲಿಗೆ ಹೂವಿನ ಕೋಮಲತೆಯನ್ನು ಅರಳಿಸಿದರೆ, ಮಾತಿನ ಮಲ್ಲಿಗೆ
ಹೂವಿನ ಸುಗಂಧದಲ್ಲಿ, ಮನಸ್ಸು ತೇಲಿ ಮಗ್ನನಾದಗ, ಹರುಷಕ್ಕೆ ಕೊನೆಯೆಲ್ಲಿದೆ ಹೇಳಿ.
ಅದಕ್ಕೆ ಹಿರಿಯವರು ಹೇಳಿರೋದು ಮಾತು ಮುತ್ತಿನಂತೆ ಇರಬೇಕ್ಕೆಂದು. ಅದರಲ್ಲು ಮಾತು
ಕನ್ನಡದಲ್ಲಿ ಮಾತಾಡಿದರಂತು ಬರಿ ಮುತ್ತಾಗಿರೊದಲ್ಲದೆ ಮುತ್ತಿನ ಮಾಲೆಯಾಗುವುದು.


ಕನ್ನಡದ ಮುತ್ತಿನ ಮಾತಿನ ಮಳೆಯ ಹನಿಗಳ ಕೆರೆಯಲ್ಲಿ,
ಸಣ್ಣ ಎಲೆಯ ಮೇಲೆ ಬರೆದ ನಾಲ್ಕು ಸಾಲಿನ ಈ ನನ್ನ ಮಾತಿನಲ್ಲೊಂದು ಮಾತು.

Sunday, January 24, 2010

ಮೂಲೆಮನೆಯಲ್ಲೊಂದು ಗುಟ್ಟು.....

ದಿನಕಳೆಯಿತು, ವಾರವಾದವು, ತಿಂಗಳಾದವು ಮನೆಗೆ ಹಾಕಿದ್ದ ಬೀಗ ಗಟ್ಟಿಯಾಯಿತು, ಕದತೆರೆದು ನೋಡಲು ಕೆಚ್ಚೆದೆಯ ಗಂಡಸರು ಕಡಿಮೆ ತೋರಿಬಂತು ಅಂಚಿನೂರಿನಲ್ಲಿ. ಎದೆಯ ಬಡಿತವು ಕಿವಿಯ ಬಾಗಿಲನ್ನು ಅಲಗಾಡಿಸದಂತ್ತಿರುವ ನಿಶ್ಶಬ್ಧ.. ಮನೆಯ ಹೊರಾಂಗಣವೆಲ್ಲಾ ಕೆಸರಿನ ಜಾತ್ರೆಯಗಿತ್ತು.. ಮನೆಯ ಅಂಗಳದಲ್ಲಿದ್ದ ಮೋತಿ (ನಾಯಿ) ಸದ್ದಿಲ್ಲದೆ ಮನೆಯ ಸುತ್ತ ತಿರುಗುವುದು ಕಂಡರೆ ಗುಂಡು ಹಾಕಿರೊ ಗುಂಡಿಗೆ ಸಹಾ ಝಲ್ ಅನಿಸುತ್ತೆ. ಭೀಕರ ಭಯಾಂಕರ ನಿಶ್ಶಬ್ಧ. ತಂಗಾಳಿಯ ತಂಪು ಬೆವರಿನ ಬೀಸಣಿಕೆಯಗಿತ್ತು.

ಉಶ್-ಹೋ ಉಶ್-ಹೋ ಉಸಿರು ಹೆಚ್ಚಾಯಿತು, ಎದೆಯ ಬಡಿತ ಜಾಕಿರ್ ಹುಸೈನ್ ತಬಲಕ್ಕಿಂತ ಕೊಂಚು ಜೋರಾಗಿ ಹೊಡೆಯತೊಡಗಿತು. ಮೈಗೆ ಸುತ್ತಿದ್ದ ಬಿಳಿ ವಸ್ತ್ರ ಗಾಳಿಗೆ ಹಾರಿಹೋಯಿತು.... ಕಾಲಿಗೆ ಮೆಟ್ಟಿದ್ದ ಮೆಟ್ಟು ಕೆಸರಿನಲ್ಲಿ ಸಿಕ್ಕಿ ಶ್ರೀಕಂಠಯ್ಯನವರ ಬುನಾದಿಯಂತೆ ತೋರಿತು. ಓಂ ಓಂಓಂ ನಮಃ ಶಿವಾಯವೆಂದು ತುಟಿ ತಟತಟವೆನುತ್ತ , ಹಲ್ಲುಗಳು ಒಂದಕ್ಕೊಂದು ಡಿಕ್ಕಿ ಹೊಡೆಯುತ್ತ ಗುನುಗಿಸುತಿದ್ದ ಶ್ರೀಕಂಠಯ್ಯ, ಇನ್ನೇನು ಪ್ರಾಣ ಹಾರಿಹೋಗುತ್ತೇನೊ ಅನ್ನುವಷ್ಟರಲ್ಲಿ ಗಾಳಿ-ಮಾತ್ತೊಂದು ಗಾಳಿಯ ಜೊತೆ ಮಹಾ ಯುದ್ಧವಾಡುವಂತೆ ಬಿರುಗಾಳಿ ಪ್ರಾರಂಭವಾಯಿತು. ದಿಕ್ಕು ತೋಚದೆ ಒದ್ದಾಡಿ-ಬಿದ್ದಾಡಿ ಕೂಗತೊಡಗಿದ ಶ್ರೀಕಂಠಯ್ಯ. ಮೋತಿ ಶ್ರೀಕಂಠಯ್ಯನವರ ವಸ್ತ್ರವನ್ನು ಹಿಡಿದು ಮನೆಯ ಸುತ್ತ ತಿರುಗುವುದನ್ನು ನೋಡಿ ಶ್ರೀಕಂಠಯ್ಯನವರ ಜೀವವಂತು ಹಾರಿ ಹೊಗುವಂತಿತ್ತು. ಹೇಗೊ ಉರಳಾಡಿ ಬಿದ್ದಾಡಿ ಗುಂಡಿಗೆಯನ್ನು ಕೈಯಲ್ಲಿ ಹಿಡಿದು, ತನ್ನ ಮನೆಯ ಸಮೀಪ ತಲುಪಿದ. ಇದು ಒಂದು ಮಹಾ ಆಘಾತವೆ ಸರಿ. ಸಾವಿನ ದವಡೆಯಿಂದ ಪಾರಾಗಿ ಬಂದ ಶ್ರೀಕಂಠಯ್ಯ ಸಾವನ್ನು ಕಣ್ಣಿಂದ ನೋಡಿದ ಹಾಗಿತ್ತು. ಗುಂಡಿಗೆ ಇಲ್ಲದ, ಮಂತ್ರ-ಪಂತ್ರ ಹೇಳಿಕ್ಕೊಂಡು ಮಹಾ ಸಾಧನೆ ಮಾಡಲಿಕ್ಕೆ ಹೊರಟ ಗಂಡಸರಿಗೆನು ಕಡಿಮೆ ಇರಲಿಲ್ಲ ಅಂಚಿನೂರಿನಲ್ಲಿ.

ಅಂಚಿನೂರು ನೆಲೆಸಿರುವುದು ಬೆಟ್ಟದ ತುದಿಯಲ್ಲಿ, ಆದ್ದರಿಂದ ಅಲ್ಲಿ ಸಾರ್ವಜನಿಕ ರಸ್ತೆ ಹಾಳಾಗಿತ್ತು. ಬಸ್-ಪುಸ್ ಅಂತು ಬಿಡಿ, ಬರಿ ಊಹ-ಪೊಹದಲ್ಲಿ ಬಂದು ಹೋಗುತಿತ್ತು. ಕತ್ತಲಾದಾಗ ವಿದ್ಯುತ್ ದೀಪ ಅಂತು, ಹಬ್ಬ ಹರಿದಿನಕ್ಕೆ ಒಮ್ಮೊಮ್ಮೆ ಬಂದು ಹಂಗ ಹಾಯ್ ರಿ - ಬಾಯ್ ರಿ ಅನ್ನುತಿತ್ತು. ಇಂಥ ಪರಿಸ್ಥಿತಿಯಲ್ಲಿ ಮೂಲೆಮನೆಯ ಗುಟ್ಟು ಅಂತು ಇಡೀ ಊರಿಗೆ ಬೆಂಕಿ ದೆವ್ವದ ಶಾಪದಂತೆ ತೋರಿಬಂತು. ಹಿಂದಿನ ದಿನ ಶ್ರೀಕಂಠಯ್ಯನವರಿಗೆ ಸಂಭವಿಸಿದ ಆಘಾತದಿಂದ ಊರ ಜನರ ಮುಖಕ್ಕೆ ಭಯದ ಬಣ್ಣ ಹಚ್ಚಿದಂತಿತ್ತು. ಊರ ಗೌಡ ಗವಿಯಪ್ಪ ಪಂಚಾಯಿತಿ ಕಟ್ಟೆಯಲ್ಲಿ ಒಂದು ತೀರಮಾನಕ್ಕೆ ಬಂದ. ಏನಪ್ಪ ಅದು ಅಂದರೆ, ಮೂಲೆಮನೆಯ ಗುಟ್ಟನ್ನು ರಟ್ಟು ಮಾಡಲು ಬೆಂಕಿ ಬ್ರಮಃ ಶಾಸ್ತ್ರಿಯನ್ನು ಕರೆತರೆಸಿ ಮನೆಯ ಬಾಗಿಲನ್ನು ತೆರೆಸುವುದು. ಊರ ಜನರ ಮುಖದಲ್ಲಿ ಮಂದಹಾಸ ಮೂಡಿತು. ಶ್ರೀಕಂಠಯ್ಯ ಈ ತೀರ್ಮಾನದಿಂದ ಅಸಮಾಧಾನದ ಸುಳಿಯಲ್ಲಿ ಮುಳಿಗಿದರು. ತನ್ನ ಅಳಿಯ ತಿಪ್ಪನ ಬಳಿ ಶ್ರೀಕಂಠಯ್ಯ ಎದೆಯಲ್ಲಿ ಅಡಗಿರುವ ಅಂಜಿಕೆ ಮತ್ತು ಬೆಂಕಿ ಬಮ್ಮ ಅದಕ್ಕೆ ಪರಿಹರಿಸುವುದಿಲ್ಲವೆನ್ನುವ ಅವರ ನಂಬಿಕೆಯನ್ನು ವ್ಯಕ್ತಪಡೆಸಿದರು. ಮಾವನ ಆತಂಕ ತಿಳಿದ ತಿಪ್ಪ ಹೀಗೆಂದು ನುಡಿದ "ಹೆ ಬೆಂಕಿ ಬಮ್ಮ ಶಾಸ್ತ್ರಿ ಅಂದರೆ ತಮಾಷೆಯೇನು, ಅವರು ಬೆಂಕಿ ಮಾವ". ಮುಳ್ಳಿನ ಕಾಲಚಕ್ರದಲ್ಲಿ ಸಿಲುಕಿದ್ದ ಶ್ರೀಕಂಠಯ್ಯನವರಿಗೆ ಎಲ್ಲಾವು ಮುಳ್ಳಿನ ಮಳೆಯಾಗಿತ್ತು.

ಬೆಂಕಿ ಬ್ರಮಃನ ಪವಾಡ ಅಮವಾಸೆಯ ದಿನ ಮಧ್ಯ ರಾತ್ರಿ ಸುಮಾರು ೧೨ಘಂಟೆಗೆ ಪ್ರಾರಂಭವಾಯಿತು. ಇಡಿ ಊರಿಗೆ-ಊರೆ ಮೂಲೆಮನೆಯ ಹತ್ತಿರ ನೆಲೆಸಿತ್ತು. ಬೆಂಕಿ ಬ್ರಮಃ, ಬೇವಿನ ಸೊಪ್ಪನ್ನು ಹಿಡಿದು ಮೋತಿಯ ತಲೆಗೆ ರಪ-ರಪವೆಂದು ಹೊಡೆದು ಓಂ ಮಾಯಿಕಿ-ಪ್ಯಾಕಿ-ಪನ್ನಿಲ್ಲ ಕೊದಕ್ಕಿ ಚಿಮಿನಿಕಿ ಚಾ ಚುಂ ಚುಂ ಛಯ್ಯ ಛಯ್ಯ ವೆಂದು ಕೂಗಿದ!!!!!!!!! ಇದನ್ನು ಕೇಳಿದ ಊರ ಜನರೆಲ್ಲಾ ಏನೊ ಮಹಾಮಂತ್ರ ಇದೆಯಪ್ಪ ಅಂತ ಆಶ್ಚರ್ಯ ಪಟ್ಟು ನೋಡುತ್ತಿದ್ದರು. ಜನಗಳ ಗುಂಪಿಂದ ಬಾಲಕ ಬಸ್ಸ್ಯ ಇದೆನಪ್ಪ ಬೆಂಕಿ ಬ್ರಮಃ ಛಯ್ಯ-ಛಯ್ಯ ಹಾಡು ಹಾಡುತಿದ್ದಾನೆ ಅಂತ ನಗುತ್ತ ತನ್ನ ಗೆಳೆಯ ವಿರೂಪನಿಗೆ ಹೇಳಿದ.... ಇದನ್ನು ಕೇಳಿದ ಬಸ್ಸ್ಯನ ತಾಯಿ ಬೀರವ್ವ ಮಗುವಿನ ಬಾಯಿ ಮುಚ್ಚಿದಳು. ಮೋತಿಗೆ ಮತ್ತೊಂದು ಏಟು ಹೊಡೆಯುವಷ್ಟರಲ್ಲಿ ಮನೆಯಿಂದ ಒಂದು ಸದ್ದು ಕೇಳಿತು, ಅದನ್ನು ಕೇಳಿದ ಬೆಂಕಿ ಬ್ರಮಃ ತಾನು ಬೆಂಕಿಯಲ್ಲಿ ಭಸ್ಮನಾದಂತಿತ್ತು. ಕೂಗು ಹೀಗಿತ್ತು " ನಿನ್ನ ಸಾವು ನನ್ನ ಕೈಯಲ್ಲಿದೆ ಹಾ ಹಾ ". ಬೆಂಕಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಊರ ಜನರ ಮುಂದೆ ತನ್ನ ಟಯರು ಇಂಗೆ ಪಂಚರ್ ಆಗುತ್ತೆ ಅಂತ ಭವಿಶ್ಯ ಬೆಂಕಿ ಊಹೆ ಮಾಡಿರಲಿಕ್ಕಿರಲಿಲ್ಲ. ಬೆಂಕಿ ಬ್ರಮಃ ಏನಾದರು ಮಾಡಿ ಸಾಹಸ ಮಾಡಿಯೆ ಬಿಡಬೇಕೆಂದು ೧೦ ಜನರಿಂದ ಆಯುಧ ತರೆಸಿ, ಬಾಗಿಲನ್ನು ಹೊಡಿಸಲಿಕ್ಕೆ ಕರೆದನು. ಇನ್ನೇನು ಆಯುಧದಿಂದ ಹೊಡೆಯುದರೊಳಗಾಗಿ ೧೦ ಅಂಗುಲದ ಸರ್ಪವೊಂದು ಊರ ಜನರ ಮೈ ಮೇಲೆ ಬಿದ್ದು ಜನರ ಪ್ರಾಣದ ಜೊತೆ ಜಾರಬಂಡಿ ಆಟವಾಡಿತು. ಇದನ್ನು ಕಂಡ ಬೆಂಕಿ ಬ್ರಮಃ ಪಂಚೆ ಉದರಿದಂತೆ, ಹುಚ್ಚು ಹಿಡಿದ ನಾಯಿಯಂತೆ, ಹಿಂದೆ-ಮುಂದೆ ನೋಡದೆ ಹಿಗ್ಗಾ-ಮುಗ್ಗಾಗಿ ಓಡಿದನು. ಊರಿಗೆ-ಊರೆ ಒಲಂಪಿಕ್ಸ್ ಗೇಂ ಇದ್ದ ಹಾಗೆ, ಒಬ್ಬರಿಗಿಂತ ಒಬ್ಬರು ವೇಗವಾಗಿ ಓಡೋಡಿ ತಮ್ಮ ಮನೆ ಬಾಗಿಲನ್ನು ಮುಚ್ಚಿಕೊಂಡರು. ಎಲ್ಲೆಲ್ಲು ಬಿರುಗಾಳಿಯ ಸದ್ದು ಬಿಟ್ಟರೆ ಊರ ಅಂಗಳದಲ್ಲಿ ಮತ್ತಾವುದು ಸದ್ದಿರಲಿಲ್ಲ.

ಮರುದಿವಸ ಎಂದಿನಂತೆ ಊರ ಜನರು ಪಂಚಾಯಿತಿ ಕಟ್ಟೆಗೆ ಸೇರಿದರು. ಜನರು ಊರನ್ನು ಬಿಟ್ಟು ಹೋಗುವ ಗಟ್ಟಿ ಮೇಳವನ್ನು ಊರ ಗೌಡರ ಮುಂದೆಬಾರಿಸತೊಡಗಿದರು. ಮೂಲೆಮನೆಯ ಗುಟ್ಟಿಂದ ಸಮಸ್ಯೆಗಳ ಸರಪಣಿಯಲ್ಲಿ ಜನರು ಬಂದ್ಧಿತರಾಗಿದ್ದರು. ಊರ ಮಕ್ಕಳು ಸಾಯುತ್ತಿರುವ ಸಂಖೆ ದಿನ ದಿನ ಏರುತ್ತಲೆ ಇತ್ತು. ಊರ ಹೆಂಗಸರ ಗೋಳು ಗೌಡರಿಗೆ ನಿದ್ರೆ-ನೆಮ್ಮದಿ ಕೆಡಿಸಿ ತಲೆಯಲ್ಲಿ ಕೆಂಪಿರುವೆಯ ಗೂಡು ಮಾಡಿತ್ತು. ಗೌಡ ಬೆಂಕಿ ದೆವ್ವದ ಕಾಟವಿರಬಹುದೇನೊ ಅಂತ ತಿಳಿದು, ಬೆಂಕಿ ದೆವ್ವಕ್ಕೆ ಶಾಂತಿ ಮಾಡಿಸಬೇಕೆಂದು ಊರ ಜನರನ್ನು ಕೇಳಿಕೊಂಡ. ಈ ಕಾಟ ಶುರುವಾದಾಗಿನಿಂದ ಬೆಂಕಿ ದೆವ್ವಕ್ಕೆ ಕೋಳಿ, ಮೇಕೆ ಬಲಿ ಕೊಡುತ್ತಾನೆ ಇದೀವಿ ಮಹರಾಯರೆ ಆದರು ಕಡಿಮೆ ಆಗುವ ಲಕ್ಷಣಾನೆ ಕಣಿಸ್ತಿಲ್ಲ ಎಂದರು ಊರ ಜನರು.

ಗವಿಯಪ್ಪ ತಲೆ ಕೂದಲು ಕೆದರಿ, ಕೈ ಸೊತು ಪೋಲಿಸ್ ಮಲ್ಲಣ್ಣ ಎಸ್.ಐ ಗೆ ಸಮಸ್ಯೆಯನ್ನು ಪರಿಹರಿಸಿಹುದಾಗಿ ಬೇಡಿಕೊಂಡರು. ಮಲ್ಲಣ್ಣನು ಮಾತು ಕಡಿಮೆ, ಮೈ ಮೂಳೆಮುರಿಯುವುದು ಕೊಂಚ ಹೆಚ್ಚು. ಮಲ್ಲಣ್ಣ ಮರುದಿನವೆ ಊರ ಬಾಗಿಲನ್ನು ತಲುಪಿ ಸಂಪೂರ್ಣ ಸಂಶೊಧನೆ ಪ್ರಾರಂಭಿಸಿದರು. ಮನೆಯ ವಿಷಯ ಬಂದಾಗ ತಿಳಿದು ಬಂತು, ತಾಯಣ್ಣ ಮತ್ತು ದೇವಮ್ಮ ಎಂಬ ದಂಪತಿ ವಾಸ ಮಾಡುತಿದ್ದರು ಎಂದು. ಇದ್ದಕ್ಕಿದ್ದ ಹಾಗೆ ಅವರಿಬ್ಬರು ಮಾಯವಾದರು, ಯಾರಿಗು ಸುಳಿವಿರಲಿಲ್ಲ. ತಾಯಣ್ಣ ಊರಲ್ಲಿರುವ ಪ್ರತಿ ಒಬ್ಬರ ಹತ್ತಿರ ಸಾಲ ಮಾಡಿದ್ದರು. ವಿಷಯ ತಿಳಿದ ಮಲ್ಲಣ್ಣ, ಸಾಲ ಚುಕ್ತ ಮಾಡಲಿಕ್ಕಾಗದೆ ದಂಪತಿಗಳು ಪರಾರಿಯಾಗಿರಬಹುದೆಂದು ತಿಳಿದರು. ಮೂಲೆಮನೆಯ ಬಗ್ಗೆ ಕೇಳಿಬಂದ ಮತ್ತೊಂದು ವಿಷಯವೆಂದರೆ ಕಲ್ಲು ಕೇಶವನ ಪ್ರಾಣ ಹಾರಿದ ವಿಷಯ. ಕಲ್ಲು ಕೇಶವ ಕುಂಬಾರ. ಗಡಿಗೆ ವ್ಯಾಪಾರ ಮಾಡಿ ಮರಳಿ ಮನೆಗೆ ಬರುತ್ತಿದ್ದಾಗ ಆ ಮನೆಯಿಂದ ಒಂದು ಧ್ವನಿ ಕೇಳಿ ಬಂತು, ನಂತರವೆ ಜೀವ ಹಾರಿತು. ಆಶ್ಚರ್ಯ ಸನ್ನಿವೇಶವೆಂದರೆ ಕೇಶವನಿಗೆ ಯಾವುದೆ ಭಾಗದಲ್ಲಿ ಪೆಟ್ಟಾಗಿರಲಿಲ್ಲ. ಇದನ್ನು ಕೇಳಿದ ಮಲ್ಲಣ್ಣನಿಗೆ ಸ್ವಲ್ಪ ಗಾಬರಿಯಾಗಿದಂತು ನಿಜ. ಮುಖದಲ್ಲಿ ಗಂಭೀರ ಭಾವನೆ ತೋರಿದರು ಅಲ್ಲಲ್ಲಿ ಬಂಡೆಯಿಂದ ಜಾರಿದ ಚಿಲುಮೆಯ ನೀರಿನ ತರಹ ಬೆವರು ಸಹ ತೊರಿತು.

ಪೋಲಿಸರ ಸಂಶೊಧನೆ ಏನೊ ಶುರುವಾಯಿತು, ಆದರೆ ಪ್ರಾರಂಭದಲ್ಲೆ ಮಲ್ಲಣ್ಣ ಗಾಳಿವಿಲ್ಲದ ಕಲ್ಚೆಂಡಾದನು. ಯೋಚನೆಯ ತಳಹದಿಯನ್ನು ತಲುಪಿದ ಮಲ್ಲಣ್ಣ, ತಂಬಾಕಿನ ತುಂಡನ್ನು ಹಿಡಿದು ಕೊನೆಗೂ ಒಂದು ಕುತುಹಲಕಾರಿಯಾದ ಪ್ರಶ್ನೆಯನ್ನು ಊರ ಜನರ ಮುಂದಿಟ್ಟ. ಕುಂಬಾರ ಸತ್ತಿದು ನಿಜ ಆದರೆ ಕೂಗು ಕೇಳಿದವರಾರು? ಬೇರೆ ಯಾರೊ ಕುಂಬಾರನ ಜೊತೆ ಇರಬೇಕಲ್ಲವೆ. ಅದಕ್ಕೆ ಸಿಕ್ಕಿದ ಉತ್ತರ ಪಂಪ. ಪಂಪ ಕುಂಬಾರ ಕೇಶವನ ಶಿಶ್ಯ. ಪಂಪವನ್ನು ವಿಚಾರಿಸಿದಾಗ ಪಂಪ ಕೇಳಿದ ಕೂಗು " ನಿನ್ನ ಸಾವು ನನ್ನ ಕೈಯಲ್ಲಿದೆ ಹಾ ಹಾ.ಅದನ್ನು ಕೇಳಿದ ಕೇಶವ ಸತ್ತು ಹೋದ... ಕತ್ತಲೆಯಲ್ಲಿ ಏನು ತೊಚದೆ ಊರ ಗೌಡರ ಮನೆ ಬಾಗಿಲು ತಟ್ಟಿದೆ ಸಾರ್" ಎಂದ ಕೆಂಪ. ಮಲ್ಲಣ್ಣನಿಗೆ ಸಿಕ್ಕಿದ ಮೊದಲನೆಯ ಸುಳಿವು ಏನೆಂದರೆ ಬೆಂಕಿ ಬ್ರಮಃ ಮತ್ತೆ ಕುಂಬಾರನಿಗಾದ ಅನಾಹುತದಲ್ಲಿ ಕೇಳಿಬಂದ ಕೂಗು ಒಂದೆ. ಎರಡನೆಯ ಸಂಶೊಧನೆವೆಂದರೆ ತಾಯಣ್ಣನನ್ನು ಹುಡುಕುವುದು.

ಮೂರನೆಯ ವಿಷಯ ಮೋತಿಯನ್ನು ಅರ್ಥ ಮಾಡಿಕೊಳ್ಳುವುದು. ಮೋತಿ ಅತಿ ಬುದ್ಧಿವಂತ ನಾಯಿ :-) (ನಾವೆಲ್ಲರು ಮಾದರಿ ಪಾಠಶಾಲೆಯಲ್ಲಿ ಓದಿರುವ ಹಾಗೆ) ಅದು ಯಾಕೆ ಮನೆಯ ಸುತ್ತ ಪ್ರತಿ ದಿನ ತಿರುಗುವುದು, ಮನೆಯ ಬಾಗಿಲಿನ ಬಳಿಯಿಂದ ಸರ್ಪದ ಗೂಡನ್ನು ಹುಡುಕುವುದು.

ಹೀಗೆ ಒಂದಕ್ಕೊಂದು ಗುಟ್ಟನ್ನು ಬಿಡಿಸುತ್ತ ನಡೆದ ಮಲ್ಲಣ್ಣನಿಗೆ ಜಯದ ಬಾಗಿಲು ಸಮೀಪವೆನಿಸಿತು. ಮಲ್ಲಣ್ಣ ತಾವೊಂದು ಬಾರಿ ಕೂಗನ್ನು ಕೆಳಬಯಸಿದರು. ಪೋಲಿಸರ ಸಹಾಯದಿಂದ ಮತ್ತೆ ಮೂಲೆಮನೆ ಹತ್ತಿರ ಬಂದೂಕಿನ ಮದ್ದು ಸಿಡಿಸಿದರು. ಕೆಲವೆ ಗಳಿಗೆಯಲ್ಲಿ ಕೇಳಿಬಂತು ಕರಿಮೊಡಛಾಯೆಯ, ಗಟ್ಟಿಗಾಳಿಗೆ ಗುಡಿಗಿದ ಕೂಗು " ನಿನ್ನ ಸಾವು ನನ್ನ ಕೈಯಲ್ಲಿದೆ ಹಾ ಹಾ ". ಮಲ್ಲಣ್ಣ, ಹುಲಿ ಹೆಬ್ಬುಲಿಗೆ ಬಾಗದವ, ಗುಂಡಿಗೆಯ ಗಂಡು, ಕೂಗನ್ನು ರೆಕಾರ್ಡಿಂಗ್ ಮಾಡಿಸಿದ. ನಂತರ ಧ್ವನಿ ಸಂಶೊಧನೆ ಕಛೇರಿಗೆ ಕಳಿಸಿದನು. ಕುತುಹಲಕಾರಿಯಾಗಿ ಧ್ವನಿ ಸಂಶೊಧನೆ ಕಛೇರಿಯ ಬಾಗಿಲನ್ನು ಕಾಯುತ್ತಿದ್ದ ಮಲ್ಲಣ್ಣನಿಗೆ, ಆಶ್ಚರ್ಯಚಕಿತ ಪಡೆಸಿದ ಉತ್ತರ, ಕೂಗು ಯಾವುದೆ ಭೂತ ಅಥವ ಮನುಷ್ಯನ ಧ್ವನಿವಿರಲಿಲ್ಲ. ನೀವೆಲ್ಲರು ಆಶ್ಚರ್ಯ ಪಡುವಂತೆ ಮಲ್ಲಣ್ಣನು ಪಟ್ಟಿದ. ಧ್ವನಿ ಒಂದು ಗಿಣಿಯದಾಗಿತ್ತು. ಈ ಸಾಕ್ಷಿಮೂಲಕ, ಮನೆಯಲ್ಲಿ ಒಂದು ಗಿಣಿ ಇರುವುದಂತು ಖಡಾ ಖಂಡಿತವೆಂದು ತೀರ್ಮಾನಿಸಿದ. ಎರಡನೆಯ ಗುಟ್ಟು ಮೋತಿಯದಾಗಿತ್ತು. ನಾಯಿ ತರಭೇತಿ ಕೇಂದ್ರದಿಂದ ಪರಿಶೀಲನೆ ಮಾಡಿಸಿದಾಗ ಮೋತಿ ಮನೆಯ ಯಜಮಾನನಿಂದ ಮನೆ ಕಾಯುವ ಅಪ್ಪಣೆ ಪಡೆದಿತ್ತು. ಮಲ್ಲಣ್ಣನಿಗೆ ಇವೆಲ್ಲ ವಿಚಿತ್ರ ಕನಸಿನ ಕಥೆಯಂತೆ ತೋರುತಿತ್ತು. ಮಲ್ಲಣ್ಣ ಮನೆಯ ಬಾಗಿಲನ್ನು ಹೊಡೆಸುವುದಾಗಿ ಆದೇಶ ನೀಡಿದನು. ಇದನ್ನು ತಿಳಿದ ಗವಿಯಪ್ಪ, ಗಾಬರಿ ಗುಬ್ಬಚ್ಚಿಯಂತೆ ಮಲ್ಲಣ್ಣನನ್ನು "ಸ್ವಾಮಿ ನಾವು ಬಡಪಾಯಿ ಜನಗಳು ವಾಸಮಾಡುವ ಸ್ಥಳವಿದು. ನಮ್ಮ ಊರ ಮಕ್ಕಳ ಪ್ರಾಣ ನಿಮ್ಮ ಕೈಯಲ್ಲಿದೆ, ಆದ್ದರಿಂದ ಈ ಬಾಗಿಲನ್ನು ಈಗಲೆ ಹೊಡೆಸದಿರಿ" ಎಂದು ಕೊರಿದನು. ಜನರ ಕೋರಿಕೆಯಂತೆ ಮಲ್ಲಣ್ಣನು ಸರಿಯೆಂದ. ಮೂರನೆಯ ಗುಟ್ಟು ಸರ್ಪದ ಬಗ್ಗೆ ಅವನಿಗಿದ್ದ ಅನುಮಾನ. ಮಲ್ಲಣ್ಣ ಮನೆಯ ಬಾಗಿಲ ಬಳಿ ಇದ್ದ ಸರ್ಪವನ್ನು ಬೆಂಕಿಯ ಭಯ ತೋರಿಸಿ ಓಡಿಸಿಯೆ ಬಿಟ್ಟ.

ಬಾಗಿಲನ್ನು ತೆರೆಯಬೇಕಾದ ಸನ್ನಿವೇಶ. ಮಲ್ಲಣ್ಣನ ತೀರ್ಮಾನ ಊರ ಜನರ ಮುಂದಿಟ್ಟ. ಈ ಮನೆಯನ್ನು ಕಾಪಡಲಿಕ್ಕೆ ತಾಯಣ್ಣ ನಡೆಸಿದ ಕುತಂತ್ರವಿದು. ಯಾರೂ ಮನೆಯ ಸುತ್ತ ಬಾರದಂತೆ ಪ್ರಾಣಿಗಳಿಗೆ ಕಾವಲಿಟ್ಟ. ಮನೆಯಲ್ಲಿ ಗಿಣಿವಿದೆ, ಹೊರಗಡೆ ಮೋತಿವಿದೆ, ಬಾಗಿಲ ಬಳಿ ಸರ್ಪವಿದೆ. ಇದು ಹೇಗೆ ಸಾಧ್ಯವೆಂದು ಅನುಮಾನ ಬರುವುದು ಸಹಜ. ಅದಕ್ಕೆ ಉತ್ತರ ತಾಯಣ್ಣ, ಒಬ್ಬ ಮಾಟ-ಮಾಯ ತರಭೇತಿ ಪಡೆದಿದ್ದ ಮನುಷ್ಯ. ಅವನು ಪ್ರಾಣಿ-ಪಕ್ಷಿಗಳಿಗೆ ಮಾತು ಕಲಿಸಿ ಕೆಲಸಮಾಡಿಸಿಕೊಳ್ಳುತಿದ್ದ. ಜನರಿಗೆ ಹೆದರಿಸಿ ಸಾಲ ಮಾಡಿಕೊಂಡು ಕೊನೆಗೆ ಸಾಲದ ಹಣ ಹಿಂತಿರುಗಿಸಲಾಗದೆ ಓಡಿ ಹೋದನು. ಆದರೆ, ಅವನ ಸ್ವಂತ ಮನೆಯಾದುದ್ದರಿಂದ ಮನೆಯನ್ನು ಯಾರು ಆಕ್ರಮಿಸಿಕೊಳ್ಳಬಾರದೆಂದು ಈ ರೀತಿ ಕಾವಲಿರಿಸಿ ಓಡಿ ಹೋದನು. ಮಲ್ಲಣ್ಣನ ಮಾತನ್ನು ಕೇಳಿ ಊರ ಜನರಿಗೆ ಅತಿಯಾದ ನಂಬಿಕೆ ಏನು ಬರಲಿಲ್ಲ ಆದರೆ ಈ ಸರ್ತಿ ಮಲ್ಲಣ್ಣನನ್ನು ತಡಿಯಲಿಕ್ಕಾಗಲಿಲ್ಲ. ಮಲ್ಲಣ್ಣ ಅತಿ ಬುದ್ಧಿವಂತಿಕೆಯಿಂದ ಮೋತಿಯನ್ನು ಸೆರೆ ಹಿಡಿದನು. ನಂತರ ಐದಾರು ಆಳುಗಳಿಂದ ಬಾಗಿಲನ್ನು ಹೊಡೆಸಿದನು. ಊರ ಜನರು ಈ ಸರ್ತಿ ಆಯುಧವನ್ನು ಕೈಯಲ್ಲಿ ಹಿಡಿದೆ ಸಜ್ಜಾಗಿ ಬಂದಿದ್ದರು. ಬಾಗಿಲನ್ನು ಹೊಡೆದಾಯಿತು. ಗುಟ್ಟು ರಟ್ಟಾಗಿ ಹೋಯಿತು. ಮನೆಯಿಂದ ಹಾರಿಬಂದ ಗಿಣಿ ಅದೆ ಕೂಗನ್ನು ಕೂಗಿ ಹಾರಿಹೋಯಿತು. ಊರ ಜನರು ಸುಮಾರು ಐದಾರು ಘಂಟೆ ಚಪ್ಪಾಳೆ ಬಾರಿಸಿ, ಹಬ್ಬದ ವಾತವರಣ ಶ್ರುಷ್ಠಿಸಿದರು. ಅದೇನು ಸಡಗರ ಅದೇನು ಸಂಭ್ರಮ ಬಣ್ಣಿಸಲಿಕ್ಕಾಗದು.

ಗವಿಯಪ್ಪನಿಗೆ ಅನುಮಾನದ ಭೂತ ಮಾತ್ರ ಕಡಿಮೆಯಾಗಲಿಲ್ಲ, ಕುಂಬಾರ ಕೇಶವ ಸತ್ತಿದ್ದಕ್ಕೆ ಕಾರಣ ತಿಳಿದಿಲ್ಲವೆಂದು. ಅದಕ್ಕು ಮಲ್ಲಣ್ಣನ ಬಳಿ ಉತ್ತರವಿದೆ. ಕುಂಬಾರನ ಒಡತಿ ಹೇಳಿದ ಪ್ರಕಾರ, ಕುಂಬಾರನಿಗೆ ಹೃದಯ ಬಡಿತದ ಕಾಯಿಲೆ ಇತ್ತು. ಸಮಾಧಾನದ ಸಂತೆಗೆ ಸಜ್ಜಾಗಿದ್ದ ಗವಿಯಪ್ಪನ ಬಳಿ ಮತ್ತೊಂದು ಪ್ರಶ್ನೆವಿತ್ತು. ಮಕ್ಕಳು ಸಾಯುತ್ತಿರುವುದೇಕೆ?. ಆಟದ ಹುಚ್ಚು-ಚಕ್ರವಿಲ್ಲದ ಬಂಡಿಯ ಮೇಲೆ ಸವಾರಿ ಮಾಡಿದ ಮಕ್ಕಳು ವಿಷಪೂರಿತ ಹಣ್ಣೊಂದನ್ನು ತಿಂದಿರುವ ಸಂಗತಿ ಯಾರಿಗೂ ತಿಳಿದಿರಲು ಸಾಧ್ಯವಿಲ್ಲ. ಇದರ ಬಾಲವನ್ನು ಹಿಡಿದು ತಳಹದಿ ತಲುಪಿದ ಮಲ್ಲಣ್ಣನನಿಗೆ ಸಿಕ್ಕಿದ್ದು, ಕಾಡು ವಿಷಪೂರಿತ ಗಿಡವೊಂದು. ಮಲ್ಲಣ್ಣನ ಸಂಶೊಧನೆಗೆ ಇಡಿ ಅಂಚಿನೂರಿಗೊಂದೆಯಲ್ಲ, ಸುತ್ತ ಮುತ್ತಲಿನ ಹತ್ತೂರಿನ ಜನರು ಪ್ರಶಂಸೆ ಮಾಡಿದರು. ಗುಟ್ಟು ರಟ್ಟಾದ ಕೆಲವೆ ದಿನದಲ್ಲಿ ಮಲ್ಲಣ್ಣ ಮತ್ತು ತನ್ನ ತಂಡದವರು ತಾಯಣ್ಣ ಮತ್ತು ಅವರ ದಂಪತಿಯನ್ನು ಮಿಂಚೂರಿನಲ್ಲಿ ಸೆರೆಹಿಡಿದು ಊರ ಜನರಿಗೆ ವಿಷಯ ತಲುಪಿಸಿದರು.

ಮೂಲೆಮನೆಯ ಗುಟ್ಟು, ಇಡಿ ಊರಿಗೆ-ಊರೆ ಮುದರಿಕೊಂಡು ರಸವಿಲ್ಲದ ಕಬ್ಬಿನಂತೆ ಮಾಡಿತು. ಇನ್ನು ಮುಂದೆ ಅಂಚಿನೂರು ನಿಟ್ಟುಸಿರು ಬಿಟ್ಟು ಶಾಂತಿಯಿಂದ ಜೀವನ ಸಾಗಿಸಿದರು. ಕೆಚ್ಚೆದೆಯ ಗಂಡಸರ ಗುಂಡಿಗೆಯನ್ನು ನುಚ್ಚುನೂರು ಮಾಡಿದ ಮೂಲೆಮನೆಯಲ್ಲೊಂದು ಗುಟ್ಟು ಊರಿಗೆ ಒಳ್ಳೆ ಪಾಠವನ್ನು ಕಲಿಸಿತು. ಬುದ್ಧಿವಂತಿಕೆ ಇರಲಿ, ಅದಕ್ಕೆ ಜೊತೆಯಾಗಿ ಧರ್ಯವಿರಲಿ..ಧರ್ಯ ಮತ್ತು ಬುದ್ಧಿವಂತಿಕೆ ಜೊತೆ-ಜೊತೆಯಾಗಿ ಸಾಗಲಿ... ಇವೆರಡಿಲ್ಲದೆ ಇದ್ದರೆ ಮತ್ತೊಂದು ಮೂಲೆಮನೆಯಲೊಂದು ಗುಟ್ಟು ತಲೆ ಎತ್ತಿ ನಿಲ್ಲುವುದು ಖಡಾ ಖಂಡಿತ.....

ಅಂಚಿನೂರಿನ ಮೂಲೆಮನೆಯಗುಟ್ಟನ್ನು ರಟ್ಟಿಗಿಟ್ಟ ಮಲ್ಲಣ್ಣ ಯಾರಿರಬಹುದೆಂದು ನಿಮಗೆ ತಿಳಿಯಲು ಕುತೂಹಲವೆ???? ????
??????
???????
???......
ಧರ್ಯ+ಬುದ್ಧಿ= ಮಲ್ಲಣ್ಣ ( ಈ ಫ಼ಾರ್ಮುಲದ ಹೆಸರು ಅರ್ಥನುವರ್ಥನು ಲೆಕ್ಕಗಳ್ಳು )

Sunday, March 8, 2009

ಅದ್ಭುತ!

ಮೋಡದ ಮರೇಯಲ್ಲಿ ....
ಬೆಳಕಿನ್ ಕೀರಣದಲ್ಲಿ.... ಕಳೆದು ಹೋದ ಕ್ಷಣಗಳು ಅದ್ಭುತ .....

ಕಣ್ಣೀಂದ ಕಾಣದ ಪ್ರೀತಿಯ....

ಮನಸೋಂದು ಹೆಳೀದ ತುಟಿ ಪಿಟುಗಿಸಿದ್ ಮಾತುಗಳು ಅದ್ಭುತ.....

ಹಕ್ಕಿಯ ಕೊಕ್ಕರೆಯಲ್ಲಿ ಅಡಗಿದ ಮಾತು.....

ಮೀನಿನ ಹೆಜ್ಜೇಯಲ್ಲಿ ಅಡಗಿದ ಚಲನೆ ಅದ್ಭುತ...

ಮನಸೋಂದು ಕುಡೀಟ್ಟ ಕೊರಗು.....

ಮನಸೋಂದು ಕುಡೀಟ್ಟ ಹುಮ್ಮಸೀನ ಮಾತು ... ಕಣ್ಣಲ್ಲಿ ಅಡಗಿದ್ದ ಕ್ಷಣಗಳು ಅದ್ಭುತ

Saturday, August 16, 2008

ಗುಡಿಯ ನೋಡಿರಣ್ಣ

ನನ್ನ ಆರಾದ್ಯ ದೈವ..........
ನಾನು ಎಂಬ ಅಹಂಕರವ ಮರೆಸುವ, ನಾವು ಎಂಬ ಜೀವನದ ಬೆಳಕು ಚೆಲ್ಲಿದ ಶ್ರೀ ಸಂತ ಶಿಶುನಾಳ ಶರೀಫ ರವರಿಗೆ ನನ್ನ ಹೃದಯ ಪೂರ್ವಕ ಸ್ರಸ್ತಂಗ ನಮಸ್ಕಾರಗಳು...





Sunday, July 27, 2008

ನಾವು ಹಿಂಗ್ಯಾಕ!

ನಾವು ಹಿಂಗ್ಯಾಕ!
ನಾವು ಹಿಂಗ್ಯಾಕ ... ನಾವು ಹಿಂಗೆ ಇಲ್ಲದಿದ್ದರೆ ಹೇಂಗೆ ಇರಬಹುದಿತ್ತು....
ಹಾಂಗೆ ಅಂದರೆ ಹೇಂಗೆ,

ಚಿಕ್ಕವರಿದ್ದಾಗ ದೊಡ್ದವರಾಗ ಬೇಕಂತ ಅಸೆ
ದೊಡ್ದವರಗಿದ್ದಾಗ ಚಿಕ್ಕವರಾಗ ಬೇಕಂತ ಅಸೆ ಹಿಂಗ್ಯಾಕ !

ಗೋಧಿಬಣ್ಣದ ಚೆಲುವೆ ಕಂಡಾಗ, ಬಿಳಿಬಣ್ಣದ ರಂಗಿನ ಅಸೆ
ಬಿಳಿಬಣ್ಣದ ಫಿಗುರ್ ಬಳಿ ಇದ್ದಾಗ , ನಮ್ಮೂರ ಫಿಗುರೆನ ಅಸೆ ಹಿಂಗ್ಯಾಕ !

ಮೇಲ್ಮನೆಯಲ್ಲಿ ಇದ್ದಾಗ ಕೆಳಮನೆಯ ಅಸೆ
ಕೆಲಮನೆಯಲಿ ಇದ್ದಾಗ ಮೇಲ್ಮನೆಯ ಅಸೆ ಹಿಂಗ್ಯಾಕ !

ಹಳ್ಳಿಯಲ್ಲಿದಾಗ ಡಿಲ್ಲಿಯ ಅಸೆ
ಡಿಲ್ಲಿಯಲ್ಲಿದಾಗ ಗಲ್ಲಿಯ ಅಸೆ ಹಿಂಗ್ಯಾಕ !

ಪ್ರಾಜೆಕ್ಟ್ ನಲ್ಲಿದಾಗ ಬೆಂಚಲ್ಲಿ ಇರೋಕೆ ಅಸೆ
ಬೆಂಚಲ್ಲಿ ಇದ್ದಾಗ ಪ್ರೋಜೆಕ್ಟ್ನಲ್ಲಿರೋಕೆ ಅಸೆ ಹಿಂಗ್ಯಾಕ !

ಇಂಡಿಯಾದಲ್ಲಿದಾಗ ಪಿಜ್ಜಾ ,ಬುರ್ಗೆರ್ ನ ಅಸೆ
ಅಮೆರಿಕಾದಲ್ಲಿಗ ಇಡ್ಲಿ ವಡ , ದೋಸೆಯ ಅಸೆ ಹಿಂಗ್ಯಾಕ !

ಅವಳು ಬಳಿ ಇದ್ದಾಗ ಬೇರೆಯವಳ ಅಸೆ
ಯಾರು ಇಲ್ಲದೆ ಇದ್ದಾಗ ಅವಳ ಅಸೆ ಹಿಂಗ್ಯಾಕ !

ಇಂಡಿಯಾದಲ್ಲಿರೋವರಿಗೆ ಅಮೇರಿಕಾದ ಹುಚ್ಚು
ಇಲ್ಲಿರೋವರಿಗೆ ಅಲ್ಲಿಗೆ ಹೋಗೋ ಹುಚ್ಚು ಹಿಂಗ್ಯಾಕ!

ಹಿಂಗೆ ಹಾಂಗೆ ನಡುವೆ ಜೀವನದ ಬಂಡಿ ಸಾಗಲಿದೆ
ಗುರಿ ತಲಪುವ ಮುನ್ನ ಬದುಕಲು ಮರೀಬೇಡಿ ,

ಬದುಕು ಬಂಗಾರ.. ಬದುಕಿದರೆ ಮಾತ್ರ ಅದವೆ ಸಿಂಗಾರ...

ಅವಳ ನೆನಪು

ಅವಳ ನೆನಪು

ಕಾಡಿದೆ ಇಂದು ಅವಳ ನೆನಪು....
ಅಂದೆ ಮುಗಿಯುತೆಂದೆ ಅವಳ ನೆನಪು...
ಇಂದು ಎಂದೆಂದೂ ಸದಾ ಇರುವೆ ಎಂದಿದೆ ಅವಳ ನೆನಪು

ಕೆರೆಯ ಮೇಲಿನ ಎಲೆಯ ಮೇಲೆ ಆಣೆ॥
ಅವಳು ಇಟ್ಟ ಎಜ್ಜೆಯ ಗೆಜ್ಜೆಯ ಮೇಲಿನ ಆಣೆ ...
ಮನದಲ್ಲಿ ಅಲೆದಾಡಿದೆ ಇಂದು ಅವಳ ನೆನಪು ....

ಹೇಗೆ ನಾ ಮರೆಯಲಿ ಅವಳ ನೆನಪು ...
ಮರೆತು ಕೂಡ ಮರೆಯದಾಗಿದೆ ಅವಳ ನೆನಪು ...
ದ್ವನಿ ದ್ವನಿ ಪ್ರಥಿದ್ವಾನಿಯಗಿದೆ ಅವಳ ನೆನಪು ...

ತುಂಡು ತುಂಡು ಪುರ್ನಚಂದರಿನ ಮುಖವಾಡ ...
ಸವಿ ಸವಿ ಮಾತಿನ ಮಂದಾರ .....
ಚುಂ ಚುಂ ಗೆಜ್ಜೆಯ ಸಂಗೀತ ಅವಳ ನೆನಪು ....

ಮುಂಜಾನೆಯ ತುಸು ಪಿಸಿನ ಗುಸು ಪಿಸು ಮೌನ ರಾಗ ...
ಮದ್ಯಾನದ ಹಾಲು ಸಕ್ಕರೆಯ ಭಾವಗೀತೆ .....
ಮುಸಂಜೆಯ ಕಡಲ ತಿರದ ಹೃದಯಗೀತೆ ಅವಳ ನೆನಪು ....

ಎಲ್ಲಿರುವೆ ನಾ ಇಂದು .....
ಎಲ್ಲೆಲ್ಲಿ ಹೋಗಲಿ ನಾ ಮುಂದು .....
ನಾ ನಿನ್ನ ಮರೆಯಲಾರೆ ಎಂದಿದೆ ಅವಳ ನೆನಪು ....

ಕಾಡಿದೆ ಇಂದು ಅವಳ ನೆನಪು....
ಅಂದೆ ಮುಗಿಯುತೆಂದೆ ಅವಳ ನೆನಪು...
ಇಂದು ಎಂದೆಂದೂ ಸದಾ ಇರುವೆ ಎಂದಿದೆ ಅವಳ ನೆನಪು