Friday, June 20, 2008

Nammoora munjaane

ಮುನ್ನುಡಿ:ನೆನಪುಗಳು ಅತಿ ಮಧುರ.ನೆನಪುಗಳು ಸದಾ ಸಿಹಿಯ ಶೆವಗೆ ಇದ್ದ ಹಾಗೆ.ನೆನಹು ಬಾಲಿನ ಬುತ್ತಿ, ಅನುಭವಗಳ ಅಕ್ಷಯ ನಿಧಿ, ಜಿವನಯತ್ರೆ ಬೇಸರವಾದಾಗ, ಜೀವನದಲ್ಲಿ ನವನವಿನಥೆ ಮೊಲೆಯದೆ ಮಂಕು ಕವಿದಾಗ, ಜೀವನದಲ್ಲಿ ಬೆಸಿಳಬೆಗೆ ಬಳಲಿದಾಗ, ನಾವು ನೆನಪಿನ ಬುತ್ತಿ ತೆಗೆದು ಕಹಿ ನಾಲಿಗೆಗೆ ಒಂದಿಸ್ಟು ಸಿಹಿಯ ರುಚಿ ಕೊಡಬಹುದು. ನೆನಪು ಸಕ್ಕರೆಯ ಗೂಡಿನ ಹಾಗೆ. ಕಷ್ಟದ ಅನುಭವ ಇರಲಿ ಸುಖದ ಅನುಭವ ವಿರಲಿ ಎರಡನ್ನು ಸಮಾನತೆ ಇಂದ ನೋಡುವ ಮನೋಭಾವ ನೆನಪಿನಲ್ಲಿರುತದೆ. ಎಲ್ಲೇ ಇರಲಿ, ಮನದ ಅಂಗಳಲ್ಲಿ ನೆನಪಿನ ಬುತ್ತಿ ಬಿಚ್ಚಿಟ್ಟರೆ ಸಾಕು, ಮನಸು ಮಯಾಜಿಂಕೆಯಾಗಿ ತನ್ನದೇ ಅದ ಅಂಗಳದಲ್ಲಿ ಕುಣಿದು ಅನುಭವಗಳ ರಾಶಿಯಲ್ಲಿ ಮೈ ಮರೆಯುತದೆ.ನಾವು ಎಲ್ಲೇ ಇರಲಿ, ಅಮೆರಿಕಾದ ಸಂಫ್ರನ್ಸ್ಸಿಸ್ಕೋ ಮಯಾನಗರಿಯ ಸಂತೆಯಲ್ಲಗಲಿ, ರಾಜಸ್ಥಾನದ ಮರುಬುಮಿಯಲ್ಲಗಲಿ, ನೆನಪುಗಳನ್ನು ಸವಿದ ಕ್ಷಣದಲ್ಲಿ ನಮಗೆ ಆ ನೆನಪಿನ ಅಂಗಳಕ್ಕೆ ಕರೆದೊಯುತದೆ , ನೆನಸಿ ನೆನಸಿ ನಲಿದಾದ್ ಬಹುದು , ನಮಗೆ ಬೇಕಾದವರು , ನಮ್ಮ ಜೀವನ ಅನುಬವಗಳಲ್ಲಿ ಒಳ್ಳೆಯವರು ಬಳಿಯಿದ್ದರೆ ಅವರಿಗೂ ಆ ಬುತ್ತಿಯ ಪರಿಚಯ ಮಾಡಿಕೊಟ್ಟು, ಒಂಟಿಯಾಗಿ ಅನುಬವಿಸುವ ಸುಕವನ್ನು ಇಮ್ಮಡಿಯಾಗಿ ಅನುಬವಿಸಬಹುದು . ಅಳಿಸುವವರಲ್ಲಿ ತಥಸ್ಯರವಾಗಲಿ, ವಂಗ್ಯ ಪರಿಹಸಯವಾಗಲಿ, ಜಿಹಸೆಯಗಲಿ, ಜುಗುಪ್ಸ್ಯೆಳಗಲಿ ತೋರಿ ಬಂದರೆ ಬೈಮುಂಚಿಕೊಂಡು ಮನದಲ್ಲಿ ಬುತ್ತಿ ಊಟ ಮಾಡಬಹುದು.

ನೆನಪಿನ ಸಾಗರಸುಲಿ ಇಂದ ಒಂದೆರಡು ಹನಿಗಳನ್ನು ನಿಮ್ಮೆಲ್ಲರ ಜೊತೆ ಹಂಚಿಕೊಂಡು , ಮೈ ತೋಲೆಸುಕೊಳ್ಳುವ ಬಯಕೆ ನನ್ನದು . ನೀವು ನನ್ನೊಡನೆ ಬರ್ಥಿರ ಅಂತ ಅಂದು ಕೊಂಡಿದೇನೆ ,ನಮ್ಮೂರ ಹಳ್ಳಿಗಳಿಗೆ ಸ್ವರ್ಗದ ಸಂಗ ಗೆಲೆತನವಿದೆ, ಸಂಸ್ಕೃತಿಯ ಸಡಗರ, ದೇವನದೆವಥೆ, ಅವರ ರಜಾದಿನಗಳು ಬೂದರೆಗೆ ಬಂದು ಆಚರಿಸುವಂಥ ಸ್ತಳನೆ ನಮ್ಮೂರ ಹಳ್ಳಿಗಳು. ಅದೆಸ್ಟು ಹಸಿರಿನ ಬೈನದುರು, ಪ್ರಕೃತಿ ತೈಯಿಯ ತವರಿನ ಬೀಡು , ಹಕ್ಕಿಗಳ ಸಂಗೀತ ಮಂದಿರ . ಗಂಗಮ್ಮನ ಆಟಚೆಲ್ಲಟದ ಮೈದಾನ , ಭುಕಿರಿಟದ ಗತ್ತಿನ ಪರವಥಗಳ ನಾಡು . ಸುಂದರ ಸೃಷ್ಟಿಯಾ ವನಗಾಲ ಜಾಡು.

ನಾನು ನಮ್ಮೂರ ಮುಜಾನೆಯಾ ಬಗ್ಗೆ ಈ ಒಂದು ಲೇಖನದಲ್ಲಿ ಹೇಳಲು ಹೊರಟಿದ್ದೇನೆ. ನನ್ನ ಬಾಲ್ಯದಲ್ಲಿ ನಡೆದ ಹಲವು ಸಂಗಥಿಯಲ್ಲಿ ಒಂದನ್ನು ಆರಿಸಿ ನಿಮ್ಮ ಮುಂದೆ ತೆರೆದಿತ್ತಿದೇನೆ. ನಮ್ಮೂರು ಎಂದರೆ ನನಗೆ ಪ್ರೀತಿಯ ತವರುನಾಡಗಿದೆ. ನಮ್ಮೂರಲ್ಲಿ ನಡೆದ ಎಸ್ಟೋ ಹಸ್ಸ್ಯಮಯ, ಗಂಬಿರ, ಹಬ್ಬದ ಊಟ, ಬಯಲಟದ ಕುಣಿತ, ಬೇಟೆಯ ಕಥೆ ಎಲ್ಲವುದರ ಬಗ್ಗೆ ಮುಂದಿನ ಲೇಖನದಲ್ಲಿ ಬರೆಯುವೆ. ಈಗ ಹೇಳಲು ಹೊರಟಿರುವುದು ನನ್ನ ಮನಸಿನಲ್ಲದ ಕುಣಿತದ ಬಗ್ಗೆ. ಇಗೋ ಇಲ್ಲಿ ತೆರೆದಿಟ್ಟಿದೇನೆ........................................


>>>>>>>
ನಮ್ಮೂರ ಮುಂಜಾನೆ:
ನಮ್ಮೂರ ಮುಂಜಾನೆ ಎಂದರೆ ನನಗೆ ಬಲು ಹಿಗ್ಗು, ಕೋಳಿಯ ಕೊಕ್ಕರೆಯ ಖೂ ಖೂ ಎಂದು ಕೇಳಿಸುವ ಆ ಗಂಟಲಿನ ಗಂಟೆ, ಅರೆ ಬರೆ ನಿದ್ರೆ ಗೆ ವಿರಾಮ ನಿದುತಿತ್ತು. ನಮ್ಮ ದೊಡ್ಡಮ್ಮನ ತುಲಿಸಿ ಪೂಜೆಯ ಗಂಟೆ ಏನು ಕಡಿಮೆ ಬಡಿಯುವುದಿಲ್ಲ, ಒಟ್ಟಾಗಿ ಗಂಟೆಗಳ ಸದ್ದು, ನಿದ್ದೆಯನ್ನು ಮೆಲ್ಲ ಮೆಲ್ಲಗೆ ಹೊರ ಹಕುತಿತ್ತು. ಆ ಹೂ ಎಂದು ಕಣ್ಣು ತೆರೆಯುವುದರೊಳಗೆ ಸಕ್ಕು(ಶಕುನ್ಥಳ) ನನ್ನ ತಂಗಿ ಅಣ್ಣ ಚಹಾ ಕುಡಿ, ಸ್ಪೆಷಲ್ K.T ಅಂತ ಎದ್ದೆಲಿಸುತಾಳೆ. ಬಿಸಿ ಬಿಸಿ ಚಹಾ ಗಿಲಾಸನ್ನು ಅರ್ದ ಕಣ್ಣಿಂದ ನೋಡಿ, ಕೈ ಚಾಚಿ ಇದಿದಾಗ ಮಲ್ಲಿಗೆ ಹೂವಿನ ಕೊಮಳಥೆ ಸಿಗುವುದೇ ಹೇಳಿ, ಕಣ್ಣು ಇನ್ನಸ್ಟು ಅರಳಿ, ಎದ್ದೇಳು ಲೇ ಎಂದು ಕೊಗಿದ ಮನಸು, ಇಡಿ ದೇಹವನ್ನು ಅಳಗಾದಿಸುತ್ತೆ. ನಮ್ಮೂರ ಚಹಾ ಅಂದರೆ ಸಕ್ಕರೆಯ ಪಾನಕ ಇದ್ದ ಹಾಗೆ. ಗಟ್ಟಿ ಗಟ್ಟಿ ಹಾಲಿನಲ್ಲಿ ಸಕ್ಕರೆಯ ಸಂಘ, ಚಹಾ ಪುಡಿಯ ಹೊಕಲಿ ಅಡಿದನ್ಥಿರುತದೆ. ಚಹಾದ ಒಂದು ತೊಟ್ಟು ನಾಲಿಗೆಗೆ ಬಿಳುವುದೇ ತಡಾ, ಮೈ ಮನ, ಅರಳೋ ಕಮಲದ ಹೂವಂತೆ ಅರಳಿ ಬಿದುತದೆ. ಸದಾ ಅಜ್ಜಮ್ಮನ ಕೊಗು ಏನು ಅನ್ಥಿರಾ, ನಿದ್ರೆ ಮೊಬ್ಬಲ್ಲಿ ಚಹಾ ಮೈ ಮೇಲೆ ಬಿಲಿಸ್ಕೋ ಬೇಡ ಮಗ ಅಂತ, ಅವರ ರಾಗ ಪ್ರತಿ ದಿನವು ಪ್ರಥಿದ್ವಾನಿಯನ್ಥಿರುತದೆ. ಆ ಕೊಗಿನಲ್ಲಿ ಪ್ರೀತಿಯ ಹನಿಗಳ ಗುಂಪು ಇರುತ್ಹವೇ. ಪ್ರೀತಿಯ ಸಕ್ಕರೆಯ ಗೂಡಿನ ಪ್ರತಿ ರೂಪವೇ ನಮ್ಮಜ್ಜಿ. ಇನ್ನೇನು ಚಹಾ ಮುಗಿಸೋ ವಸ್ಥ್ರಲ್ಲಿ, ದೊಡ್ಡಮ್ಮ ಅತ್ತ ಕಡೆ ಇಂದ ಬೇಗ ಹಲ್ಲು ಉಜ್ಜಪ್ಪ ಅಂತ ಹೇಳಿದಳು. ಆ ದಿನ, ದೊಡ್ಡಮ್ಮ ನನಗೆ ಅಬಯಂಗ ಮದುಸುತಿದ್ದ ದಿನಗಳ ನೆನಪು ಬಂತು. ಅಬಯಂಗ ವೆಂದರೆ ಮೈಯನ್ನು ಕಾಯಿಸಿದ ಎಣ್ಣೆ ಇಂದ ಗರ ಗರ ಎಂದು ಉಜ್ಜಿ, ಬಿಸಿ ಬಿಸಿ ಕುಧಿಯುವ ನಿರಿಂದ ಮೈ ತೊಳೆಯುವುದು. ತಲೆಯ ಮೇಲೆ ರಾಪ ರಾಪ ನೀರಿನ ಹನಿಗಳು ಇಗ್ಗು ಮುಗ್ಗಾಗಿ ಬಿದ್ದಾಗ, ದೇಹದ ಕಂಡ ಪುಸ್ಟಗಳು ಸಡಿಲವಾಗಿ ಸೋತು ತಲೆಬಾಗಿಬಿದುತವೆ. ಎಷ್ಟು ಸಾರಿ ಬೇಡ ದೊಡ್ಡಮ್ಮ ಸಾಕು ಇನ್ನು ನಿರು ಸುರಿಯ ಬೇಡ ಎಂದು ಹಟ ಮಾಡಿದುಂಟು. ಅಬ್ಬ ಈಗ ಸದ್ಯಕ್ಕೆ ಅಬಯಂಗದ ಕಾಟ ತಪ್ಪಿತು ಎಂದು ನನಸ್ತಿಗೆ ನಾನೆ ನಗುತಿದ್ದೆ. ಅಸ್ಟರಲ್ಲಿ ತಿಪ್ಪು(ನನ್ನ ತಮ್ಮ) ಬೇವಿನ ಕಡ್ಡಿ ಇಡಿದುಕೊಂಡು ಬಂದು ಬಿಟ್ಟ.

ಟಿಪ್ಪು ಮತ್ತು ನನಗೆ ಅಜ ಗಜಂತರ ವತ್ಯಾಸ. ಅವನು ನುಸಿ ನುಸಿ ಮುಂಜಾನೆ ಎದ್ದು, ದನ ಕರುಗಳಿಗೆ ಮೇವು ಹಾಕಿ, ಮನೆಗೆ ಬಾವಿಇಂದ ನೀರನ್ನು ತುಂಬಿ, ಅತ್ತ ಹೊಲದ ಕಡೆಗೂ ಕಣ್ಣು ಹಾಯಿಸಿ ಮನೆಗೆ ಬಂದು ಸೇರುತನೆ. ಚಿಕ್ಕ ವಯಸಿನಲ್ಲೇ ಅದೆಸ್ತು ಕೆಲಸ ಮಾಡ್ತಾನೆ ಅನ್ಥಿರ, ಈ ಕೆಲಸವೆಲ್ಲ ಅವರಿಗೆ ದಿನನಿತ್ಯದ ಕೆಲಸವಗಿರುವುದರಿಂದ ಅಂತ ಮಹಾನ್ ಕೆಲಸವೆಂದು ಅನಿಸಿಕೊಳುವುದಿಲ್ಲ ಬಿಡಿ. ಹಾಸಿಗೆ ಇಂದ ಮೆಲ್ಲ ಮೆಲ್ಲನೆ ಎಜ್ಜೆ ಇಡುತ್ತ, ಮನೆಯ ಮೇಲ್ಚವಡಿಗೆ ಹೋದೆ. ನಮ್ಮ ಮನೆಯಲ್ಲಿ ಮೇಲ್ಚವಡಿಗೆ ಹೋಗಲಿಕ್ಕೆ, ಒಂದು ಸಣ್ಣ ಚವ್ಕಕರದ ಮನುಶ ದೂರುವಸ್ತ್ತುಕಿಂಡಿ ತೆರೆದಿರುತದೆ. ಅದಕ್ಕೆ ಒಂದು ನಿಚ್ಚನಿಕೆ ಇರುತದೆ. ಆ ಕಿಂಡಿ ಮನೆಯ ಬೆಳಕಿನ ಮತ್ತು ವಾಯುವಿನ ಮೂಲ. ಏಣಿಯ ಸಹಾಯದಿಂದ ಮೇಲೆ ಹೋದೆನು. ಮೇಲೆಹೊದಕ್ಷ್ಣ ಮನಸು ಉಲ್ಲಸಗೊಂಡಿತು.ಕಾರಣ, ಆ ದಿನ ಪ್ರಕೃತಿ ತನ್ನ ಕರಾಮತ್ತು ತೋರಿಸಿಯೇಬಿತಿತ್ತು, ಮರೆಯಲಾರದ ದಿನವಾಗಿ ಮನಸಿನಲ್ಲಿ ಮನೆಮಾಡಿದೆ. ಮುಗಿಲಿಗೆ ತಲೆ ಎತ್ತಿ ನಿಂತ ಎತ್ತರ,ಬಲು ಎತ್ತರದ ಪರ್ವತ ಶಿರೋಮನಿಗಳ ಗುಂಪು, ತಂಗಾಳಿಗೆ ಕುನಿಯತಿತ್ತು. ಕಪ್ಪು ಮೋಡಗಳ ದಿನ್ದುಂದು, ಬೂತಾಯಿಯ ಮೈಯನ್ನು ತ್ಹೊಲೆಯುದಿಕ್ಕೆ ಸಜ್ಜಗಿತ್ತು. ಎಲೆಲ್ಲಿ ಹಚ್ಹ ಹಸಿರಿನ ತಾಣ, ಪ್ರಕೃತಿ ತಾಯಿ ತನ್ನ ಮೈ ಬಣ್ಣದ ಹೊಳಪು ಬಿರಿದ ದಿನಗಳು. ದೂರ ಬೆಟ್ಟದಲ್ಲಿ ಕಾಣಿಸುವ ಗವಿ ಸಿದ್ದೆಶ್ವರನ ಬಿಳಿ ಗೋಪುರ, ಬೂ ತಾಯಿಯ ಬೆಳ್ಳಿ ಮುಗಿಥಿ ತರ ಕನಿಸುತಿತ್ತು. ತಂಗಲಿಯ ಸ್ಪರ್ಷ, ಸೂರ್ಯನ ಒರೆಕಿರಣಗಳು ಮೈಯನ್ನು ಸೊಂಕಿದಾಗ ಮೂಡಿದ ಆನಂದದ ಅಲೆಗಳು, ಹಕ್ಕಿಯ ಚಿಲಿಪಿಲಿ ಗಾನ, ಮೂಖ ಮುಗ್ದ ದನಕರುಗಳ ದಿಂಡು, ಅದೆಸ್ಟು ನಿಸರ್ಗಿಕ ಬದುಕು, ಮನೆಯ ಮೇಲ್ಚವಡಿ ಇಂದ ನೋಡಿದಾಗ ಕಾಣಿಸುವ ಬಸ್ ನಿಲ್ದಾಣ, ಅದರ ಸುತ್ತ ಒಂದು ಕಟ್ಟೆ, ಕಟ್ಟೆಯ ಮದ್ಯೆ ಬೇವಿನ ಮರ, ಆ ಎಲ್ಲ ದೃಶಗಳು ಪ್ಯಾರಿಸ್ ನ ಏರ್ಪೋರ್ಟ್ಗಿಂತ ಒಂದು ಪಟ್ಟು ಎಚ್ಚು ಸುಂದರ ವಾಗಿ ಕನಿಸುತಿತ್ತು. ಆ ಪ್ರಶಾಂತ ವಾದ ವಥ ವರನ, ಹಳ್ಳಿಯ ಮನ, ಹಳ್ಳಿ ಬಾಷೆಯ ಸೊಬಗು, ಬಸ್ ನಿಲ್ದಾಣದಲ್ಲಿದ ಬೇವಿನ ಮರದ ಬಿಸುನಿಕೆ, ಹರೆಟೆ ಕಟ್ಟೆಯ ಕೊಗು ಇನ್ನು ಮರೆತಿಲ್ಲ.
ನೋಡು ನೋದುತಿದಂಥಲೇ ಜಿನಿ ಜಿನಿ ಮಲೆಯಯ ಮಂದಕಮಲಗಳು ಆಕಾಶಗಂಗೆ ಇಂದ ಪಟ ಪಟ ವೆಂದು ಉದುರಿದಾಗ ತನು ಮನ ಮರೆತು ತಂಗಲಿಯಲ್ಲಿ ತೇಲಿಹೋದೆ. ಸಣ್ಣ ಸಣ್ಣ ಹನಿಗಳು ಒಂದರ ಮೇಲೊಂದು ಜಿಮ್ ಜಿಮ್ ಸದನ್ನು ಮಾಡುತ್ತ, ಮೈಯನ್ನು ಬಡಿದಾಗ, ನಾನು ನನನ್ನೇ ಮರೆತು ಹೋದೆ. ಬೂಗಂದ ಸುವಾಸನೆ ಮೂಗಿನ ಮಗ್ಗಿಳಲ್ಲೇ ಇದೆ. ಹಿಡಿತಕ್ಕೆ ಸಿಗದೆ ಗಾಲಿಗೊಪುರದಲ್ಲಿ ತೇಲಿ, ನಾಲ್ಕು ದಿಕ್ಕನ್ನು ಸಂಚರಿಸೋ ಮನಸಿಗೆ, ಎಚ್ಚರ ಮಾಡಿದ್ದೂ ಟಿಪ್ಪುವಿನ ಕೂಗು. "ಅಣ್ಣ ಬಾ" ಎಂದು ದಡ ದಡ ಕೆಳಗೆ ಹೋದನು. ನಾನಂತು ಕೆಳಗೆ ಹೋಗಲಿಲ್ಲ, ಬಯಲು ಸಿಮೆಯಲ್ಲಿ ಆಗಾಗ ಸಿಗುವ ಮಲೆನಾಡಿನ ಮೈಬನ್ನಕೆ ಸೋತು ಹೋದ ನನ್ನ ಮನಸು ಮಂಕಾಗಿತ್ತು.

ಮುಂಜಾನೆಯ ಕುಸುಮ ಬಸಿನ ಶಬ್ದ ಕೇಳಿಬಂದಾಗ ಮನಸು ಎಚ್ಚರಗೊಂದಿತು. ಸಮಯ ಸರಿಯಾಗಿ ೬:೩೦ ವಾಗಿತ್ತು, ಓಬ, ಮುನಿಯ ಇನಸ್ಟು ಜನ ಹಿಂದಿನ ರಾತ್ರಿಯಾ ವೇಳೆಗೆ ಶನಿವಾರದ ಸಂಥೆಗೆಂದು ಕಾಯಿ ಪಲ್ಲೆ ಮಾರಲು ಪೇಟೆಗೆ ಹೋಗಿದ್ದರು. ಅವರು ನಿದ್ರೆ ಮೊಬ್ಬಲ್ಲಿ ಮರಳಿ ಬರುತಿದ್ದರು, ನಮ್ಮ ದೊಡ್ದಪ್ಪನು ಕಾಣಿಸಿಕೊಂಡ, ನಮ್ಮ ದೊಡ್ಡಪ್ಪವೆಂದರೆ ನನಗೆ ಬಲು ಇಷ್ಟ,ಅವರ ಸರಳ ನುಡಿ, ಮಲ್ಲಿಗೆ ಹೂವಿನಂತೆ ಮೃದುವಾದ ಮನಸು. ೭ ಊರಿಗೆ ಒಬ್ಬ ಹರಿಶಂದ್ರ ನಂತೆ ಅವರ ನಿಜ ಸ್ವಬವ, ಅವರ ಪ್ರೀತಿಗೆ ನಾನು ಶರನಗಿದ್ದೆ. ಅವರು ಬರುತಿದಂತೆ ನಾನು ಕೆಳಗೆ ಇಳಿದು ಮಳೆಯ ಹನಿಗಳೊಂದಿಗೆ ಸ್ವಗ್ಥಿಸಲಿಕ್ಕೆ ಓಡೋಡಿ ಬಸ್ ನಿಲ್ದಾಣದ ಹತ್ತಿರ ಹೋದೆನು. ದೊಡ್ಡಪ್ಪ ವಾರದ ಸಂತೆ ಬೇರೆ ಮಾಡಿಕೊಂಡು ಬಂದಿದ್ದರು. ನಾನು ಹೋಗುವಸ್ತ್ರಲ್ಲಿ ಟಿಪ್ಪು ಕೂಡ ಹಜಾರ್ ಇದ್ದನು. ದೊಡ್ಡಪ್ಪ ನನ್ನನು ನೋಡಿದಾಕ್ಷಣ "ಹೇಯ್ ಮಗ ನೀನಾಕೆ ಬರಲಿಕ್ಕೆ ಹೋದೆ, ಮಳೆ ಬರ್ತಾ ಇದೆ, ನಿಮ್ಮ ದೊಡ್ಡಮ್ಮ ನೋಡಿದರೆ ನನ್ನ ಗತಿ ಅಸ್ಟೆ" ಅಂತ ಹೇಳಿದರು. ಎನಪ ಬಯಲು ಸಿಮೆಯ ಗಂಡು ತನ್ನ ಒಡತಿ ಎಂದರೆ ಬಯನ ಅಂತ ಅನಿಸುಥ ಇದ್ದಾರೆ ದಯವಿಟ್ಟು ಅದನ್ನು ಮನಸಿನಿಂದ ತೆಗೆದು ಬಿಡಿ, ಪ್ರೀತಿ ಪ್ರೇಮ ಬಂದನದ ನಾಲ್ಕೈದು ದಿನದ ಸಂಥೆಯೇ ಜೀವನ. ಇದು ನನ್ನ ಫಿಲಾಸಫಿ ಅಲ್ಲ ಕಣ್ರೀ, ನಮ್ಮೂರ ಫಿಳಸಪಿ. ಅದೇನೆ ಅಗಲಿ, ಮಳೆಯ ಹನಿಗಳ ಜೊತೆ ನಲಿದಾಡುವ ನನ್ನ ಮನಸು, ಸಂತ್ಹೊಸದ ಸಿಮ್ಮಸನವೆರಿ ಕುಳಿತಿತ್ತು. ಆ ದಿನ ಮಾತೊಂದು ವಿಶೇಷದ ಸಂಗತಿ ವೆಂದರೆ,

ನಮ್ಮೂರ ಪಟೇಲರ ಜೊತೆ ಮಾತಾಡಿದ ಕೆಲ ಮಾತುಗಳು.
ಸಿದ್ದ ಗಾಡಪ್ಪ ಊರಿನ ಪಟೇಲ, ಹಿರಿಯನು ಹೌದು.ಅವರು ನನ್ನನು ನೋಡಿ, ಅವರ ದಾಸ ಗೋಣಿ ಬಸಪ್ಪ ತಂದಿದ್ದ ದೊಡ್ಡ ಚತ್ರಿಯಲ್ಲಿ ನನ್ನನು ಬರಮಾಡಿಕೊಂಡ. ನಮ್ಮ ದೊಡ್ದಪ್ಪನು ಸಾಯಿ ಎಂದು ಅನುಮತಿ ಕೊಟ್ಟ. ಪಟೇಲ ನನ್ನನು ನೋಡಿ, ಶಂಕರ ನಿನ್ನ ದೊಡ್ದಪ ನೋ ಎಂದು ಕೇಳಿದ. ನಾನು ಅದಕ್ಕೆ ಹವ್ದರೀ ಎಂದೆ. ಏನು ಓದುಥಿರುವೆ ಮಗು ಎಂದು ಕೇಳಿದ. ನಾನು ಡಾಕ್ಟರ್ ಪದವಿ ಓದುತಿರುವೇನು ಎಂದೆ. ಅವರ ಮುಖ ಕೆಲ ಕ್ಷಣ ಮೂರ್ಚೆ ಹೋದಂಥೆತಿತ್ತು. ಸ್ವಲ್ಪ ಹೊತ್ತಿನ ಬಳಿಕ, ಒಹ್ ಹೌದ ದೊಡ್ಡ ವಿದ್ಯೆನೆ ಹೊದುತಿರುವೆ, ನಮ್ಮ ಹಳ್ಳಿಯಲ್ಲಿ ಯಾರು ಇದುವರೆಗೆ ಬ.ಅ ನೆ ಓದಿಲ್ಲ, ಬಲೆ ಬಲೆ ಅಂತ ಪ್ರಶಂಸೆಯ ನುಡಿ ಹೊರ ಚೆಲ್ಲಿದರು. ಇಗೆ ಮಾತು ಮಾತಿನಲ್ಲಿ ಅವರು ನನ್ನನು ಬಹಳ ಮೆಚ್ಚಿ ಕೊಂಡರು, ಹೊಗಳಿದರು. ನೀನು ಶಂಕರನ ಮಗ ಎಂಥ ಅದ್ಭುತ ಅಂತೆಲ್ಲ ಕೊಂಡಾಡಿದರು. ಇಸ್ಟೆಲ್ಲ ಹೋಗಳಲಿಕ್ಕೆ ಕಾರಣನು ಇದೆ. ಅವರ ಎಲ್ಲ ಮಕ್ಕಳು ವಿದ್ಯೆಯ ಹಾದಿ ಮರೆತು ಎಲ್ಲೆಲೆಲ್ಲೋ ಚದುರಿ ಹೋಗಿದ್ದರು. ಮತ್ತೆ ಆ ಊರಲ್ಲಿ ೧೦ನೆ ತರಗತಿ ಓದಿದ ಕೆಲವೇ ಮಹಾ ಪುರುಷರು ಇದ್ದರು, ಅವರೆ ಜ್ನನಮಂದಳದ ಮಹಾ ಪುಜಾರಿಗಳು. ಪಟೇಲ ನಮ್ಮೂರ ದೇವರ ಎಣಿಕೆಯಲ್ಲಿ ಬರುವ ಮನುಶ ಅಂದರೆ ತಪ್ಪಾಗಲಾರದು. ಅವರ ಗಮ್ಮತ್ತು, ಗ್ವರವ ಅಸ್ತಿಸ್ತಯಾಲ್ಲ. ಪಟೇಲ ಊರ ಒಳಗೆ ಎಜ್ಜೆ ಇಟ್ಟರೆ ಸಾಕು ಎಲ್ಲರು ಎದ್ದು ನಿಂತು ಗ್ವರವ ಸೂಚನ ನಿದಲೇ ಬೇಕು.ಹಾಗೆ ಪಟೇಲ ಬೇರೆ ಎಲ್ಲಾದರೂ ಹೋದ ಬಳಿಕ ಮಾತ್ರ ವಸ್ತೆ ಅವರು ಕುಡುವಂತಿತ್ತು. ಇಗೆ ಇರುವ ಪರಿಸ್ತಿತಿಯಲ್ಲಿ ಶಂಕರ ಒಬ್ಬ ಸಾಮಾನ್ಯ ಬಡಜೀವಿಯ ಸಹೋದರನ ಮಗ, ಮಹಾನ್ ವಿದ್ಯವಂಥ ವೆಂದರೆ ಅದೆಸ್ಟು ಪ್ರಶಂಸೆಯ ಮಾತು ಅನ್ಥಿರ, ಆ ಕಾಲ, ಆ ದಿನಗಳು, ಹಳ್ಳಿಯಲ್ಲಿ ಗ್ವರವದಯಕ ವಗಿದ್ದವು. ಮಾತಿಗೆ ಮಾತು ಸೇರಿಸಿ ಮಲ್ಲಿಗೆ ಹೂವು ಪೂನಿಸಿ ಹಾರ ಮಾಡು ವಸ್ತರಲ್ಲಿ ಮನೆಯಂತು ಬಂದು ಬಿಟ್ಟಿತು.ಅಲ್ಲಿಂದ ಪಟೇಲರಿಗೆ ವಿದಾಯ ಹೇಳಿ ಮನೆಯ ಕಡೆ ನಡೆದೇ.

ಮನೆಗೆ ಹೋಗುತಿದಂಥಲೆ ನಿರೀಕ್ಷೆಯಂತೆ ದೊಡ್ಡಮ್ಮನ ಬೈಗಳು ಮಳೆಯಹನಿಗಳು ಕಿಂಥ ಹೆಚ್ಚಾಗಿ ಮೈಯನ್ನು ತ್ಹೊಯ್ಸಿದವು. ದೊಡ್ಡಪ್ಪ, ಪಟೇಲ ಏನೇನು ಕೇಳಿದ ಅಂತ ಬಲು ಕುತುಹಳಕರಿಯಾಗಿ ಕೆಳತೊಡಗಿದ. ಅಜ್ಜಿ, ದೊಡ್ಡಮ್ಮ ನನ್ನನೆ ನೋಡತೊಡಗಿದರು. ಬಳಿಯ ಸಂದಿಯಲ್ಲಿಂದ ಟಿಪ್ಪು, ಕಣ್ಣಿನ ಉಬ್ಬನ್ನು ಮೆಲಾಕೆತ್ತಿ, ಬಾಯಿ ತೆರೆದ ಭಾವಿಯಂತೆ, ಕೂದಲು ಗಾಳಿಗೆ ಕೆದರಿದ ಉಲ್ಲಿನ ದಿಂಡು ಆಗಿ, ಬೆದರು ಗೊಂಬೆಯಂತೆ ಪಕ್ಕದಲ್ಲಿ ಬಂದು ನನ್ನನೆ ನೋಡ ತೊಡಗಿದ. ಸಕ್ಕು ಅಡುಗೆ ಮನೆಯಲ್ಲಿ ರೊಟ್ಟಿ ತಪ ತಪ ವೆಂದು ಬಡಿಯುದನ್ನು ನಿಲ್ಲಿಸಿ, ಕಿವಿಯ ಬಾಗಿಲು ತೆರೆದು, ಮನಸನ್ನು ಅಡುಗೆ ಮನೆಯಿಂದ ಹೊರಗೆ ಹೋಗಲು ಅನುಮತಿ ಕೊಟ್ಟಿದಳು.ಅವರೆಲ್ಲರ ಖುತುಹಲಕ್ಕೆ ಕೊಬ್ಬರಿ ಮಿಟಾಯಿ ಕೊಡಲಿಕ್ಕೆ ಸಿದ್ದನಾಗಿದಂತು ನಿಜ. ನಡೆದಿದ್ದನ್ನು ಸೊಗಸಾಗಿ ಹೇಳಿದೆ. ನಾನು ದೊಡ್ಡಪ್ಪ, ಪಟೇಲ ನಿನಗೆ ಶಂಕರ ದೊಡ್ಡಪ್ಪ ನೋ ಅಂತ ಕೇಳಿದ, ನಾನು ಅದಕ್ಕೆ ಮ್ ಎಂದೆ.ನೀನು ಡಾಕ್ಟರ್ ಅಂತ ಮಹಾ ವಿದ್ಯೆ ಓದುತಿರುವೆ ಅಂತ ಆಶ್ಚರ್ಯಚಕಿಥ ನದ ಅಂತ ಹೇಳಿದಕ್ಷಣ, ದೊಡ್ಡಪ್ಪನ ತಲೆಗೆ ಸುತ್ತಿನ ರುಮಾಲು ತಲೆಯಿಂದ ಬುಜಕ್ಕೆ ಜಾರಿ ಗ್ವರವ ಸೂಚಕ ಬಟ್ಟೆ ಯಾಯಿತು. ದೊಡ್ಡಪ್ಪನ ಕೈಯಿ ಗಂಡಸ್ತಿನ್ ಎಮ್ಮೆಯ ಬಲಿಸ್ಟವಾದ ಮೆಸೆಯ ಮೇಲೆ ಕೈಯಿ ಸವರಿತು.ಅವರು ಪಟ್ಟ ಹೆಮ್ಮೆ ಅಸ್ಟಿಸ್ತಲ್ಲ. ನಿಜವಗಿಲು ಆ ಗಳಿಗೆ ಮರೆಯಲಾರದ ಗಳಿಗೆಯಾಗಿ ಉಳಿದುಹೋಗಿದೆ. ದೊಡ್ಡಮ್ಮನ ಮೂಗುತಿ ತಕತೈ ಎಂದು ಕುನಿಯತೋದಗಿತು. ಮುಖದ ರಂಗು ಕೆಂಪು ಕೆಂಪಾಗಿ ಬದಲಾಯಿತು. ನನ್ನ ಪದಗಳು ಕೇಳಿದ ಸಕ್ಕು ಉಲ್ಲಾಸದಿಂದ ಮತಸ್ಟು ಶಬ್ದ ಮಾಡುತ್ತ ರೊಟ್ಟಿಯನ್ನು ದಪ ದಪ ವೆಂದು ಕುಟ್ಟಿದಳು. ಟಿಪ್ಪು ಎಲ್ಲರನ್ನು ನೋಡುತ್ತ, ನಗುತ್ತ, ಮೆಟ್ಟಲಿನ್ ಮೇಲೆ ಜಿಗಿದನು.ಅಜ್ಜಿ ಬಂದು ನನ್ನನು ತಬ್ಬಿಕೊಂಡಳು.ದನ ಕರುಗಳುಉಲ್ಲನ್ನು ಮೆಯುಥಲೇ "ಅಂಬಾ ಹೂ ಅಂಬಾ ಹೂ" ಎಂದು ತಮ್ಮ ಕುಗಿನೊಂದಿಗೆ ಕುಶಿಯ ರಂಗನ್ನು ಚೆಲ್ಲಿದವು. ಪ್ರಕೃತಿಯ ಮೈಯಿಕಾಂತಿ ಊರಲ್ಲಿ ಚೆಲ್ಲಟವಡುವ ಸಮಯ, ಮನೆಯಲ್ಲಿ ಹರುಷದ ಹೊನಲು, ಅಜ್ಜಿಯ ಪ್ರೀತಿ, ದೊಡ್ದಪ್ಪನ್ ಬುಜದ ಮೇಲಿನ ಪಟ್ಟ ಪಟ್ಟಿ ರುಮಾಲು, ಸಕ್ಕುವಿನ ಆನಂದ, ಮೂಖ ಪ್ರಾಣಿಯ ಕೂಗು, ಟಿಪ್ಪುವಿನ ಜಿಗಿಥ, ಅಂದೆ ಸ್ವರ್ಗದ ಬಾಗಿಲು ತೆರೆದಂತೆ ಇತ್ತು. ಆ ನಮ್ಮೂರ ಮುಂಜಾನೆ ನೆನೆದಗಳೆಲ್ಲ ಮತ್ತೆ ಊರ ಬಾಗಿಲಿಗೆ ಹೋಗಿ ಬಂದಸ್ತು ಆನಂದಾ.

ನಾನು ಉಟ್ಟಿ ಬೆಳೆದಿದ್ದು ಪೇಟೆಯಲ್ಲಿ. ನಮ್ಮ ಪೇಟೆ ಮಹಾನಗರ ಅಲ್ಲದಿದ್ದರೂ, ಚಿಕ್ಕದಾದ ಚೊಕ್ಕ ನಗರ. ಹಳ್ಳಿಯ ಹಿರಿಮನೆ ದಾಟಿ, ಅಂಗ್ಲದ ಅಸೆರೆಯ ಹಾದಿಯಲ್ಲಿ ಇಟ್ಟ ಪುಟ್ಟ ಎಜ್ಜೆಯ ನಗರ.ಬೇಸಿಗೆ ರಜ ಬಿಟ್ಟಾಗ ಅಥವ ಹಬ್ಬ ಉಣ್ಣಿಮೆ ಇರುವಾಗ ನಾನು ದೊಡ್ಡಮ್ಮನ ಮನೆಗೆ ಹೋಗುವ ಚಾಳಿ ಇಟ್ಟುಕೊಂಡಿದ್ದೆ. ನಮ್ಮೊರ್ರು ನೆಲೆಸಿರೋದು ಗುಡ್ದಗಾಡಿನ ಪ್ರದೇಶದಲ್ಲಿ. ಮನೆಯ ಅಂಗಳದ ಮಂಚದ ಮೇಲಿಂದ ಎದ್ದು ನೋಡಿದರೆ ಕಾಣಿಸುವುದು ದಟ್ಟವಾದ ಬೆಟ್ಟಗಳ ರಾಶಿಯನ್ನು.ಸುತ್ತಲು ಬೆಟ್ಟದ ಸಂತೆ.ರಾಶಿ ರಾಶಿ ದಸ್ಟ ಪುಸ್ಟ ಗಿಡ ಮರಗಳಿಂದ ಮೈಯನ್ನು ಮುಚ್ಚಿಕೊಂಡು ಮುಗಿಲಿಗೆ ತಲೆ ಚಾಚಿ ಮೆರದಡುವ ಸುಂದರ ಗುಡ್ಡ ಗಾಡಿನ ಪ್ರದೇಶ. ಕಲ್ಲು ಮಣ್ಣಿನ ದಿಬ್ಬದ ಮೇಲೆ ನೆಲೆಸಿರೋ ಹಳ್ಳಿಯೇ ನಮ್ಮೂರು. ನಮ್ಮೂರೆನು ಕಡಿಮೆ ಹೇಳುವಂತಿರಲಿಲ್ಲ, ಊರಿಗೊಂದು ಪಾಠಶಾಲೆ, ಊರಿಗೊಂದು ಗುಡಿ ಗೋಪುರ, ನೀರಿನ ಟ್ಯಾಂಕ್,ಸಕಾಗದಸ್ತು ಬಾವಿಗಳ ಸಾಲು, ಬೇರೆಲೆನಿಕೆಯ ಬೀದಿಗಮ್ಬಗಳು, ಪಂಚಯಥಿ ಕಟ್ಟೆ, ಹಬ್ಬ ಹರಿದಿನಕ್ಕೆ ಬಯಲಾಟ, ನಿಸರ್ಗಿಕ ಕಬ್ಬಿಣ ಅದಿರು, ಕಾಯಿಲೆ ವಾಸಿಗೆಂದು ಡಾಕ್ಟೋರಿನ ದವಾಖಾನೆ, ದಿನಕ್ಕೆ ಮೂರು ಹೊತ್ತು ಸಾರಿಗೆ ಸಂಪರ್ಕ. ಎಲ್ಲ ಅಕ್ಕಪಕ್ಕದ ಊರಿನ ಥರ ನಮ್ಮೂರ ರಸ್ಥೆಯು ತಗ್ಗು, ಉಬ್ಬು, ಕಲ್ಲಿಂದ ಕುಡಿದೆ. ನವಿಲಿನ ನಟಯದಂತೆ, ಕೋಗಿಲೆಯ ಕೊಗಿನಂತೆ ನಮ್ಮ ಬಸ್ ಕುಣಿ ಕುಣಿದು ಪ್ರಯನಿಸುತದೆ. ಗರ್ಬಿನಿಯರಿಗೆ ದವಾಖಾನೆ ಹೋಗುವ ಮುನ್ನವೇ ಹೆರಿಗೆ ಯಗುವುದಂತು ಕಂಡಿತ.

ಕೆಲಸದ ಬಿಸಿಗಾಳಿಯಲ್ಲಿ, ದುಡಿಮೆಯ ಅರ್ಬಟದಲ್ಲಿ ನಮ್ಮನು ನಾವೇ ಬದಳಗಿಸಿಕೊಲ್ಲಬೇಕಾದ ಪರಿಸ್ಥಿತಿಯನ್ನು ನಾವೇ ನಮ್ಮೆದುರು ತಂದಿಕೊಂದಿದೇವೆ. ನನಗೆ ಕೆಲವರು ಹೇಳುವ ಮಾತು ನೆನಪಿಗೆ ಬರುತ್ತೆ ಎನಪ ಅಂದರೆ ಕಾಲ ಬದಲಾಗಿದೆ" ಅಂತ.ನನಗೆ ಆ ರೀತಿ ಏನು ಅನಿಸುವುದಿಲ್ಲ.ಎಲ್ಲ ಹಾಗೆ ಇದೆ, ಅದೇ ಊರು, ಅದೇ ಗಾಳಿ, ಅದೇ ಪ್ರಕೃತಿಯ ಸೌಂದರ್ಯ,ಬರಿ ನಾವು ನೀವು ಬದಳಗಿದ್ದೇವೆ. ಬದಲಾವಣೆ ಪ್ರಕೃತಿಯ ನಿಯಮ ಆದರೆ ಎಷ್ಟರ ಮಟ್ಟಿಗೆ ಬದಲಾಗಬೇಕು ಅದು ನಮ್ಮ ಮೇಲೆ ಬಿಟ್ಟಿದು ಮಹಾರಾಯರೇ. ಆದೆನೆ ಅಗಲಿ ನೆನಪಿನ ಅಂಚಿಂದ ನಮ್ಮೂರ ಮುಂಜಾನೆ ಅಂತು ಜಿಗಿದು ಕುನಿಯುತಿದೆ.ನಿಮ್ಮ ಅನಿಸಿಕೆಗಳನ್ನೂ ನನಗೆ ಕೆಲ ಕಾಣಿಸಿದ ಇಮೇಲ್ ವಿಲಸಗೆ ಇಮೇಲ್ ಮಾಡಬಹುದು.
ಕನ್ನಡ:
ನನ್ನಬಯಲಾಟ@ಜಿಮೇಲ್.ಕಂ
ಇಂಗ್ಲಿಷ್:
nannabayalata@gmail.com

ಇಂತಿ ನಿಮ್ಮ ವಿಶ್

No comments: